ಇಲ್ಲಿ ಚಿರತೆ ನಾಯಿ ಕಚ್ಕೊಂಡೋಯ್ತು | ಅಲ್ಲಿ ಕೋಣ ಜೀವಾನೆ ತೆಗೆಯಿತು

dog hunted by a leopard, Bellur , Gubbiga villages, Hosanagara taluk of Shivamogga district, Mudigere taluk of Chikkamagaluru district, Assamese woman was killed in a bison attack

ಇಲ್ಲಿ ಚಿರತೆ ನಾಯಿ ಕಚ್ಕೊಂಡೋಯ್ತು | ಅಲ್ಲಿ ಕೋಣ ಜೀವಾನೆ ತೆಗೆಯಿತು
dog hunted by a leopard, Bellur , Gubbiga villages, Hosanagara taluk of Shivamogga district, Mudigere taluk of Chikkamagaluru district, Assamese woman was killed in a bison attack

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   ‌

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬೆಳ್ಳೂರನಲ್ಲಿ ಚಿರತೆಯೊಂದು ಮನೆ ಬಾಗಿಲಿಗೆ ಬಂದು ನಾಯಿಯನ್ನ ಕಚ್ಕೊಂಡೋಗಿದೆ.  

ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಕಚ್ಕೊಂಡೋಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ನಾಯಿ ಚಿರತೆಯ ಇಷ್ಟದ ಆಹಾರ, ಆದಾಗ್ಯು ಚಿರತೆಯ ಅಟ್ಯಾಕ್‌ ಮನುಷ್ಯರಲ್ಲಿ ಭಯ ಹುಟ್ಟಿಸಿದೆ. ಇಲ್ಲಿನ ಗುಬ್ಬಿಗಾ ಗ್ರಾಮದ ಮಂಜಪ್ಪಗೌಡ ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನ ಹೊಂಚುಹಾಕಿ ಚಿರತೆ ಶಿಕಾರಿಮಾಡಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೇವಲ 20 ಸೆಕೆಂಡ್‌ನಲ್ಲಿ ಚಿರತೆ ನಾಯಿಯನ್ನ ಕಚ್ಚಿಕೊಂಡು ಅಲ್ಲಿಂದ ಕಾಲ್ಕಿತ್ತಿದೆ. 

ಕಾಡು ಕೋಣ ದಾಳಿ ಮಹಿಳೆ ಸಾವು

ಮೂಡಿಗೆರೆ ತಾಲ್ಲೂಕು ಹಳೇಕೋಟೆ ಗ್ರಾಮದಲ್ಲಿ ನಿನ್ನೆ ಬುಧವಾರ ಬೆಳಿಗ್ಗೆ ಕಾಫಿ ಕೊಯ್ಲು ಮಾಡುತ್ತಿದ್ದಾಗ ಕಾಡುಕೋಣವೊಂದು ದಾಳಿ ನಡೆಸಿದೆ. ಈ ವೇಳೆ ಅಸ್ಸಾಂ ಮೂಲದ ಬಸೂರಿ ಬೀಬಿ (42) ಎಂಬ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳೆಕೋಟೆ ಗ್ರಾಮದ ಕಾಫಿ ಬೆಳೆಗಾರ ರಮೇಶ್ ಅವರ ಕಾಫಿ ತೋಟದಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಕಾಫಿ ಕೊಯ್ಲು ಮಾಡುತ್ತಿದ್ದರು. ಈ ವೇಳೆ ಕಾಡುಕೋಣ ದಾಳಿ ನಡೆಸಿದೆ.

 

SUMMARY |  dog hunted by a leopard, Bellur , Gubbiga villages, Hosanagara taluk of Shivamogga district, Mudigere taluk of Chikkamagaluru district, Assamese woman was killed in a bison attack

KEY WORDS |‌ dog hunted by a leopard, Bellur , Gubbiga villages, Hosanagara taluk of Shivamogga district, Mudigere taluk of Chikkamagaluru district, Assamese woman was killed in a bison attack