ಮಾತ್ರೆ ನುಂಗಿ ಮೆಗ್ಗಾನ್‌ಗೆ ಅಡ್ಮಿಟ್ ಆದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ , ನರ್ಸ್ | ದೂರು, ಪ್ರತಿದೂರು!
doctor and a nurse attempted suicide , BRP Hospital in Bhadravati taluk, Shimoga district, Bhadravati Rural Police Station,

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 17, 2025
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಹಾಗೂ ನರ್ಸ್ ಇಬ್ಬರು ಪರಸ್ಪರ ಆರೋಪ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದರ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ದಾಖಲಾಗಿದೆ. ಇಲ್ಲಿನ ಡಾ.ಹಂಸವೇಣಿಯವರು ಕಿರುಕುಳ ನೀಡುತ್ತಿದ್ದಾರೆಂದು ನರ್ಸ್ ಸುಕನ್ಯಾ ಹಾಗೂ ನರ್ಸ್‌ನಿಂದ ಟಾರ್ಚರ್ ಆಗ್ತಿದೆ ಎಂದು ಡಾ ಹಂಸವೇಣಿಯವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಏನಿದು ಪ್ರಕರಣ ?
ಶಿವಮೊಗ್ಗದ ಬಿಆರ್‌ಪಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ಡಾಕ್ಟರ್ ಹಾಗೂ ನರ್ಸ್ ನಡುವೆ ಮನಸ್ತಾಪ ಉಂಟಾಗಿದೆ. ನಿನ್ನೆ ದಿನ ಇದು ತಾರಕಕ್ಕೇರಿದೆ. ನರ್ಸ್ ಇತರೆ ಸಿಬ್ಬಂದಿ ಜೊತೆಗೆ ಸೇರಿ ತಮಗೆ ಕಿರುಕುಳ ನೀಡುತ್ತಿದ್ದಾರೆಂದು ವೈದ್ಯೆ ಹಂಸವೇಣಿ ಆರೋಪಿಸಿದ್ದಾರೆ. ತಮ್ಮನ್ನು ಪ್ರಭಾವ ಬಳಸಿ ವರ್ಗಾವಣೆ ಮಾಡಿ ನರ್ಸ್ ಅಪಹಾಸ್ಯ ಸಹ ಮಾಡುತ್ತಿದ್ದಾರೆ ಎಂಬುದು ಡಾಕ್ಟರ್ ಆರೋಪ. ಇತ್ತ ವೈದ್ಯೆ ತಮನ್ನು ಆಸ್ಪತ್ರೆಯಲ್ಲಿ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂಬುದು ನರ್ಸ್ ಸುಕನ್ಯಾರ ದೂರು ಇದೇ ಕಾರಣಕ್ಕೆ ಇಬ್ಬರು ಮಾತ್ರೆ ಗಳನ್ನ ನುಂಗಿದ್ದಾರೆ. ಆ ಬಳಿಕ ಇಬ್ಬರನ್ನು ಮೆಗ್ಗಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
SUMMARY | A doctor and a nurse attempted suicide at BRP Hospital in Bhadravati taluk, Shimoga district. A case has been registered at Bhadravati Rural Police Station.
KEY WORDS | doctor and a nurse attempted suicide , BRP Hospital in Bhadravati taluk, Shimoga district, Bhadravati Rural Police Station,