ರಾಜ್ಯದ ಮೋಸ್ಟ್ ವಾಂಟೆಡ್ ಹೊಸಮನೆ ಲೇಡಿಸ್ ಗ್ಯಾಂಗ್ ಅರೆಸ್ಟ್ ಆಗಿದ್ದೇಗೆ ಗೊತ್ತಾ?| ದೊಡ್ಡಪೇಟೆ ಸ್ಟೇಷನ್ ಮುಂದೇನೆ ಲಾಕ್ ಆದ ಸ್ಟೋರಿ JP ಬರೆಯುತ್ತಾರೆ
Do you know how the state's most wanted hosamane ladies gang got arrested? JP writes
SHIVAMOGGA | MALENADUTODAY NEWS | Jul 15, 2024 ಮಲೆನಾಡು ಟುಡೆ
ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಕಳೆದ ವಾರದಲ್ಲಿ ನಾಲ್ಕು ಕೇಸ್‌ಗಳನ್ನ ಪತ್ತೆ ಮಾಡಿದ್ದಾರೆ. ಶಿವಮೊಗ್ಗದ ಭೀಮಾ ಗೋಲ್ಡ್ ಮಳಿಗೆಯಲ್ಲಿನ ಚಿನ್ನಾಭರಣ ಕಳ್ಳತನ, ಸ್ನೇಹಿತನೇ ದುಡ್ಡು ಎಗಿಸಿದ್ದ ಪ್ರಕರಣದ ಜೊತೆಗೆ ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಚಿನ್ನಾಭರಣ ಕಳ್ಳತನದ ಎರಡು ಕೇಸ್‌ಗಳನ್ನ ಪತ್ತೆ ಮಾಡಿದ್ದಾರೆ. ವಿಷಯ ಇಲ್ಲೆ ಇರೋದು. ರಾಜಧಾನಿ ಬೆಂಗಳೂರಲ್ಲಿ ಆಗಿದ್ರೆ ದೊಡ್ಡಪೇಟೆ ಪೊಲೀಸ್ನೋರು ಹಿಡಿದಿರೋ ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಳ್ತನದ ಕೇಸ್ ಟಿವಿ ಎಪಿಸೋಡ್‌ಗಳಲ್ಲಿ ದೊಡ್ಡ ಸದ್ದು ಮಾಡ್ತಿತ್ತು. ಏಕೆಂದರೆ ಶಿವಮೊಗ್ಗದ ಬಸ್‌ಸ್ಟ್ಯಾಂಡ್ ಕಳ್ಳತನದ ಕೇಸ್‌ನಲ್ಲಿ ಸಿಕ್ಕಿಬಿದ್ದಿರೋದು ಸದ್ಯಮಟ್ಟಿಗೆ ರಾಜ್ಯದ ದೊಡ್ಡ ಲೇಡಿಸ್ ಗ್ಯಾಂಗ್.
ಭದ್ರಾವತಿ ಲೇಡಿಸ್ ಗ್ಯಾಂಗ್
ಶಿವಮೊಗ್ಗದಲ್ಲಿ ಇಂತಹದ್ದೊಂದು ಲೇಡಿಸ್ ಗ್ಯಾಂಗ್ ಇದೆ ಅನ್ನೋದಕ್ಕೆ ಈ ವರ್ಷದ ಆರಂಭದಿಂದ ಇಲ್ಲಿವರೆಗೂ ಬಸ್ ನಿಲ್ದಾಣದಲ್ಲಿ ನಡೆದ ಹಲವು ಕಳ್ಳತನದ ಪ್ರಕರಣಗಳು ಸಾಕ್ಷಿಯಾಗಿದ್ದವು. ಆದರೆ ಆಲ್‌ಮೋಸ್ಟ್ ಲೇಡಿಸ್‌ನ್ನೆ ಟಾರ್ಗೆಟ್ ಮಾಡ್ಕೊಂಡು ಕಳ್ಳತನ ಮಾಡ್ತಿರೋದು ಯಾರು ಎಂಬುದು ಮಾತ್ರ ಗೊತ್ತಾಗಿರಲಿಲ್ಲ. ದಿನಕ್ಕೆ ಸಾವಿರಾರು ಮಂದಿ ಓಡಾಡುವ ಬಸ್ ನಿಲ್ದಾಣದಲ್ಲಿ ಕಳ್ಳರನ್ನ ಹಿಡಿಯೋದು, ಸಂತೆ ದಾರಿಯಲ್ಲಿ ಸೂಜಿ ಹುಡುಕಿದಂತೆಯೇ ಸರಿ. ಹಾಗಿದ್ದರೂ, ಹೆಸರಿನ ಹಾಗೆ ದೊಡ್ಡಪೇಟೆಯಲ್ಲಿ ಸವಾಲಾಗಿದ್ದ ಕೆಲಸವನ್ನ ದೊಡ್ಡಪೇಟೆ ಕ್ರೈಂ ಟೀಂ ಪೂರ್ತಿಗೊಳಿಸಿದೆ. ಭದ್ರಾವತಿಯ ಲೇಡಿಸ್ ಗ್ಯಾಂಗ್‌ವೊಂದನ್ನ ಹಿಡಿದು ಅಂದರ್ ಮಾಡಿದೆ. ಈ ಬಗ್ಗೆ ಮಲೆನಾಡು ಟುಡೆಯು ಸೇರಿದಂತೆ ಹಲವು ಮಾಧ್ಯಮಗಳು ಸುದ್ದಿ ಮಾಡಿವೆ. ಆದರೆ ಹೆಬಿಚ್ಯುಲ್ ಲೇಡಿಸ್ ಗ್ಯಾಂಗ್ ಸಿಕ್ಕಿಬಿದ್ದಿದ್ದು ಹೇಗೆ ಅನ್ನೋದನ್ನ ಯಾರು ವರದಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬರೆಯುತ್ತಿರೋ ತನಿಖಾ ವರದಿಯಿದು.
ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪ್ಲಾಟ್ ಫಾರಂ ನಂಬರ್ 7,8,10
ಶಿವಮೊಗ್ಗದಲ್ಲಿ ಬಸ್ ಹತ್ತೋದು ಅಂದರೆ, ಜೇಬು ಹಾಗೂ ಚೀಲವನ್ನ ಮೊದಲು ಭದ್ರ ಮಾಡ್ಕೊಬೇಕು ಅನ್ನುವಂತಿತ್ತು ಶಿವಮೊಗದ ಬಸ್ ನಿಲ್ದಾಣಗಳಲ್ಲಿನ ಸ್ಥಿತಿ. ಅದರಲ್ಲಿಯು ಆಧಾರ್ ಟಿಕೆಟ್ ವ್ಯವಸ್ಥೆ ಬಂದ ಮೇಲೆ, ಬಸ್ ಹತ್ತಲು ಎದುರಾಗುತ್ತಿರುವ ರಶ್‌ನಲ್ಲಿ ಯಾರು ಏಲ್ಲಿ ಕೈ ಹಾಕಿ ಏನು ಕದಿಯುತ್ತಾರೆ ಎನ್ನುವುದು ಹೇಳುವುದು ಸಹ ಕಷ್ಟವಾಗಿತ್ತು. ಸಾಕ್ಷಿ ಎಂಬಂತೆ ಪೊಲೀಸರಿಗೆ ತಲೆನೋವು ತಂದಿಡುವಷ್ಟು ಕಳ್ತನದ ಕೇಸ್‌ಗಳು ದೊಡ್ಡಪೇಟೆಯಲ್ಲಿ ದಾಖಲಾಗಿದೆ. ಹೀಗೆ ಫೈಲ್‌ಗಳಿಗೆ ಬಿದ್ದ ಕೇಸ್‌ಗಳ ಪೈಕಿ ಸದ್ಯ ದೊಡ್ಡಪೇಟೆ ಪೊಲೀಸರು ಬರೋಬ್ಬರಿ 8 ಕೇಸ್‌ಗಳನ್ನ ಒಂದೇ ದಿನದಲ್ಲಿ ಇತ್ಯರ್ಥ ಪಡಿಸಿದ್ದಾರೆ.
ಜಸ್ಟ್ ಒಂದು ಅನುಮಾನ, ಕೇಸ್ ಖಲ್ಲಾಸ್ , ಐವರು ಅರೆಸ್ಟ್
ಈ ಹಿಂದೆ ಬಸ್ ನಲ್ಲಿಯೇ ಚಿಣಿಮಿಣಿ ನಡೆಸಿ ವ್ಯಕ್ತಿಯೊಬ್ಬರನ್ನ ಶಿವಮೊಗ್ಗದ ಲಾಡ್ಜ್‌ಗೆ ಕರೆದುಕೊಂಡು ಹೋಗಿ, ದುಡ್ಡು ಚಿನ್ನ ದೋಚಿದ್ದ ಪ್ರಕರಣವೊಂದು ನಡೆದಿತ್ತು. ಇದೇ ದೊಡ್ಡಪೇಟೆ ಪೊಲೀಸರು ಈ ಪ್ರಕರಣದಲ್ಲಿ ಆಯನೂರು ಮೂಲದ ಮಹಿಳೆಯನ್ನ ಅರೆಸ್ಟ್ ಮಾಡಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಳ್ಳತನದ ಕೆಲವು ಪ್ರಕರಣಗಳನ್ನ ಭೇದಿಸಿದ್ದರು. ಆ ಪ್ರಕರಣದ ಬಗ್ಗೆ ಮಲೆನಾಡು ಟುಡೆ ವರದಿ ಇಲ್ಲಿದೆ ಬಸ್ನಲ್ಲಿ ಸಿಕ್ಕ ಲೇಡಿ ಅರೆಸ್ಟ್! ರೂಂ ನಂಬರ್ 304 ಕೇಸ್ನಲ್ಲಿ …
ಈ ಪ್ರಕರಣದ ಬಳಿಕ ದೊಡ್ಡಪೇಟೆ ಪೊಲೀಸರು ನಡೆಸಿರೋ ಅತಿದೊಡ್ಡ ಬೇಟೆ ಭದ್ರಾವತಿ ಲೇಡಿಸ್ ಗ್ಯಾಂಗ್‌ನದ್ದಾಗಿದೆ. ಇಷ್ಟಕ್ಕೂ ಈ ಗ್ಯಾಂಗ್ ಸಿಕ್ಕಿದ್ದೇಗೆ ಎನ್ನುವ ಕುತೂಹಲದೊಂದಿಗೆ ಪೊಲೀಸ್ ಮೂಲಗಳನ್ನ ಕೆದಕಿದಾಗ ಸಿಕ್ಕಿದ್ದು ಇಂಟರ್‌ಸ್ಟಿಂಗ್ ಸಂಗತಿ. ಅದೇನೂ ಅಂತಾ ನೋಡುವುದಾದರೆ, ಬಸ್ ನಿಲ್ದಾಣದಲ್ಲಿ ಹೆಚ್ತಿದ್ದ ಕಳ್ಳತನ ಪ್ರಕರಣಗಳ ಬಗ್ಗೆ ಗಮನ ಹರಿಸುವ ಸಲುವಾಗಿ , ಅಲ್ಲಿ ಕ್ರೈಂ ಪೊಲೀಸರು ಮಫ್ತಿಯಲ್ಲಿ ಓಡಾಡುತ್ತಿದ್ದರು. ಹಾಗೆ ಒಂದಿನ ಕ್ರೈಂ ಸಿಬ್ಬಂದಿಗಳಿಬ್ಬರು ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ಒಳಗೆ ಓಡಾಡುತ್ತ ಅಲ್ಲಿನ ಚಟುವಟಿಕೆಗಳನ್ನ ಗಮನಿಸ್ತಿದ್ದರು. ಈ ವೇಳೆ ಅಲ್ಲಿಗೆ ಬೆಂಗಳೂರಿನಿಂದ ಬಸ್‌ವೊಂದು ತನ್ನ ಪ್ಲಾಟ್‌ಫಾರಂಗೆ ಬಂದಿದೆ. ಅಲ್ಲಿಂದ ಶುರುವಾಗಿತ್ತು ನೋಡಿ ಲೇಡಿಸ್ ಗ್ಯಾಂಗ್‌ನ ಬೇಟೆ
ಭದ್ರಾವತಿ ಟು ಶಿವಮೊಗ್ಗ
ಹೀಗೆ ಬಸ್ ಹತ್ತುವವರನ್ನ, ಇಳಿಯುವವರನ್ನ ಗಮನಿಸ್ತಿದ್ದ ಕ್ರೈ ಸಿಬ್ಬಂದಿ ರಶ್ ಆದ ಜಾಗದಲ್ಲಿ ತುಸು ಜಾಸ್ತಿಯೇ ಅಬ್ಸರ್ ಮಾಡುತ್ತಿದ್ದರು. ಇದೇ ಹೊತ್ತಿಗೆ ಬೆಂಗಳೂರಿನಿಂದ ಬಸ್ ಬಂದು ನಿಂತಿತ್ತು. ಆ ಬಸ್‌ನಿಂದ ಐವರು ಮಹಿಳೆಯರು ಇಳಿದಿದ್ದನ್ನ ಕ್ರೈಂ ಸಿಬ್ಬಂದಿ ಒಬ್ಬರು ನೋಡಿದ್ದಾರೆ. ಬೆಕ್ಕಿಗೆ ಇಲಿಯ ಪರಿಚಯ ಮಾಡಿಕೊಡಬೇಕೆ? ಹಾಗೆಯೇ ಬಸ್‌ನಿಂದ ಇಳಿದ ಮಹಿಳೆಯರ ಹಾವಭಾವ ನೋಡಿದ ತಕ್ಷಣವೇ ಕ್ರೈಂ ಸಿಬ್ಬಂದಿಗೆ ಸಣ್ಣದೊಂದು ಸಂಶಯ ಬಂದಿದೆ. ಬೆಳಗ್ಗೆಯಷ್ಟೆ ರೋಲ್‌ಕಾಲ್ ಮುಗಿಸಿ ಬಸ್ ಸ್ಟ್ಯಾಂಡ್‌ಗೆ ಬಂದು ಬೀಟ್ ಮಾಡುತ್ತಿದ್ದ ಪೊಲೀಸಪ್ಪನ ಮೈಂಡ್ ಕೂಡ ಫ್ರೆಶ್ ಆಗಿತ್ತು. ಅಷ್ಟರಲ್ಲಿ ಅನುಮಾನದ ಹುಳ ಬಿದ್ದು ಆ ಸಿಬ್ಬಂದಿ ಇನ್ನಷ್ಟು ಜಾಗ್ರತನಾಗಿದ್ದ. ಚೂರು ಕೂಡ ತಡಮಾಡದೆ, ಅನುಮಾಸ್ಪದ ಮಹಿಳೆಯರನ್ನೆ ಹಿಂಬಾಲಿಸಿದ ಸಿಬ್ಬಂದಿಗೆ ಸಣ್ಣದೊಂದು ಕ್ಲೂ ಸಹ ಸಿಕ್ಕಿತ್ತು. ಅಲ್ಲಿಯೇ ಪ್ಲಾಟ್ ಫಾರಂನಲ್ಲಿ ಓಡಾಡುತ್ತಿದ್ದ ಮಹಿಳೆಯರ ಪೈಕಿ ಒಬ್ಬಾಕೆ ತನ್ನ ಕೈಯಲ್ಲಿದ್ದ ಟಿಕೆಟ್ ಬೀಳಿಸಿಕೊಂಡಿದ್ದಳು. ಅದನ್ನ ಗಮನಿಸಿದ ಕ್ರೈಂ ಸಿಬ್ಬಂದಿ ಕೆಳಕ್ಕೆ ಬಿದ್ದ ಟಿಕೆಟ್ ತೆಗೆದು ಪರಿಶೀಲಿಸಿದ್ದಾರೆ. ಅದು ಭದ್ರಾವತಿ ಟು ಶಿವಮೊಗ್ಗ ಟಿಕೆಟ್ ಆಗಿತ್ತು. ಅದನ್ನ ಗಮನಿಸಿದ ಸಿಬ್ಬಂದಿಗೆ ಇವರು ಲೋಕಲ್ ಅನ್ನುವುದು ಗೊತ್ತಾಗಿದೆ. ಮೊದಲೇ ಅನುಮಾನದಲ್ಲಿದ್ದ ಸಿಬ್ಬಂದಿ ತಕ್ಷಣ ತಮ್ಮ ಕ್ರೈಂ ಟೀಂಗೆ ಕನೆಕ್ಟ್ ಆಗಿದ್ದಾರೆ ಮತ್ತು ಬಸ್ ನಿಲ್ದಾಣದಲ್ಲಿ ಸಸ್ಪೆಕ್ಟ್ ಮಹಿಳೆಯರು ಓಡಾಡುತ್ತಿರುವ ಬಗ್ಗೆ ಪೂರ್ತಿ ಮಾಹಿತಿ ನೀಡಿದ್ದಾರೆ. ಆ ಕಡೆ ವಿಷಯ ತಿಳಿದ ದೊಡ್ಡಪೇಟೆ ಕ್ರೈಂ ಟೀಂ ಅಲರ್ಟ್ ಆಗಿದೆ. ಎಲ್ಲರ ತಲೆಯಲ್ಲಿಯು ಬಸ್ ನಿಲ್ದಾಣದ ಕಳ್ತನ ಕೇಸ್‌ಗಳು ಪ್ಲಾಶ್ ಆಗಿದ್ದವು.
ಕಾನೂನಿನ ಸಂಕಟದ ನಡುವೆ
ಆದರೆ ಹೇಳಿಕೇಳಿ ಮಹಿಳೆಯರು. ಪುರುಷ ಪೊಲೀಸ್ ಒಬ್ಬ, ಸಸ್ಪೆಕ್ಟ್ ಲೇಡಿಸ್‌ನ್ನ ನೇರಾನೇರ ಹಿಡಿದು ಸ್ಟೇಷನ್‌ಗೆ ಕರೆ ತಂದು ವಿಚಾರಿಸಲು ಆಗಲ್ಲ. ಹಾಗಂತ ತಕ್ಷಣಕ್ಕೆ ಬೇಕಿದ್ದ ಮಹಿಳಾ ಪೊಲೀಸ್ ಪೇದೆಯ ಲಭ್ಯತೆಯು ಅಲ್ಲಿರಲಿಲ್ಲ. ಪೊಲೀಸರಿಗೆ ಈ ವಿಚಾರ ಒಂದು ರೀತಿಯಲ್ಲಿ ಏಗಲಾಗದ ಸಂಗತಿ. ಹಾಗಿದ್ದು ಸಹ ಆ ಪರಿಸ್ಥಿತಿಯಲ್ಲಿ ತಾನೇನು ಮಾಡಬಹುದು ಎಂದು ಯೋಚಿಸಿದ ಕ್ರೈಂ ಸಿಬ್ಬಂದಿ ಅಲ್ಲಿ ಗಸ್ತಿನಲ್ಲಿದ್ದ ಇನ್ನೊಬ್ಬ ಸಹೋದ್ಯೋಗಿಯನ್ನ ಕರೆಸಿಕೊಂಡಿದ್ದಾರೆ. ಅವರ ಬಳಿ ಇದ್ದ ಹಳೆಯ ಆರೋಪಿಯ ಫೋಟೋವನ್ನ ನೋಡಿ ಸಸ್ಪೆಕ್ಟ್ ಇವರೇ ಇರಬಹುದಾ ಎಂದು ಐಡೆಂಟಿಫೈ ಮಾಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಲೇಡಿಸ್ ಗ್ಯಾಂಗ್ ಸಾಗರ ಹೋಗುವ ಬಸ್ ಹತ್ತಿತ್ತು. ಸ್ವಲ್ಪ ತಡವಾಗಿದ್ರೂ ಇಡೀ ಟೀಂ ಸಾಗರಕ್ಕೆ ಹೋಗುತ್ತಿತ್ತು. ಆದರೆ ಅಷ್ಟರಲ್ಲಿ ಕ್ರೈಂ ಸಿಬ್ಬಂದಿ ಬಸ್ ಹತ್ತಿ ಮೊಬೈಲ್‌ನಲ್ಲಿದ್ದ ಫೋಟೋಗೆ ಹೋಲಿಸಿ ಮಹಿಳೆಯೊಬ್ಬರನ್ನ ಐಡೆಂಟಿಫೈ ಮಾಡಿದ್ದ. ಅಲ್ಲಿದ್ದ ಇಬ್ಬರು ಕ್ರೈಂ ಸಿಬ್ಬಂದಿಗೂ ತಾವು ಎದುರುಗೊಂಡಿರುವುದು ಲೇಡಿಸ್ ಕಳ್ಳಿಯರ ಗ್ಯಾಂಗ್ ಅನ್ನುವುದು ಕನ್‌ಫರ್ಮ್ ಆಗಿಹೋಗಿತ್ತು.
ಠಾಣೆಯ ಎದುರೇ ಸಿಕ್ಕಿಬಿದ್ದ ಗ್ಯಾಂಗ್
ತಮ್ಮ ಅನುಮಾನವನ್ನು ಸ್ಪಷ್ಟ ಮಾಡಿಕೊಂಡ ಇಬ್ಬರು ಪೊಲೀಸ್ ಸಿಬ್ಬಂದಿ ಅದೇ ಬಸ್‌ನ್ನ ಹತ್ತಿಕೊಂಡಿದ್ದಾರೆ. ಜೊತೆಯಲ್ಲಿ ತಮ್ಮ ಸ್ಟೇಷನ್‌ನ ಮಹಿಳಾ ಪೊಲೀಸ್ ಟೀಂಗೆ ಸಿದ್ದರಾಗಿರುವಂತೆ ಅಲರ್ಟ್ ಮಾಡಿದ್ದಾರೆ. ಬಸ್ ಸಾಗರಕ್ಕೆ ಹೊರಟಿತ್ತು. ಬಸ್ ನಿಲ್ದಾಣದಿಂದ ಸಾಗರಕ್ಕೆ ಹೋಗುವ ಬಸ್ ದೊಡ್ಡಪೇಟೆ ಪೊಲೀಸ್ ಠಾಣೆಯ ಮುಂದೆಯೇ ಹಾದು ಹೋಗುತ್ತದೆ. ಹೀಗೆ ಹೊರಟಿದ್ದ ಬಸ್‌ನ್ನ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಮಹಿಳಾ ಸಿಬ್ಬಂದಿ ಠಾಣೆಯ ಬಳಿ ನಿಲ್ಲಿಸಿ ಅನುಮಾಸ್ಪದವಾಗಿದ್ದ ಲೇಡಿಸ್ ಟೀಂನ್ನ ವಶಕ್ಕೆ ಪಡೆದಿದೆ. ಹೀಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಲೇಡಿಸ್ ಗ್ಯಾಂಗ್‌ನಿಂದ ಬರೋಬ್ಬರಿ ಎಂಟು ಕೇಸ್‌ಗಳು ಬಯಲಾಗಿವೆ. ಸರಿಸುಮಾರು ಎಂಟು ಲಕ್ಷಕ್ಕೂ ಅಧಿಕ ಮೌಲ್ಯದ ಮಾಲು ಪತ್ತೆಯಾಗಿದೆ.
ಬಂಧಿತರು
1) ಶಾಂತಿ @ ಕರ್ಕಿ, 31 ವರ್ಷ, ಹನುಮಂತನಗರ, ಹೊಸಮನೆ ಭದ್ರಾವತಿ
2) ಮೀನಾಕ್ಷಿ, 38 ವರ್ಷ, ಹನುಮಂತ ನಗರ, ಹೊಸಮನೆ ಭದ್ರಾವತಿ,
3) ಸಾವಿತ್ರಿ @ ಬಾಬಾ, 29 ವರ್ಷ, ಹನುಮಂತ ನಗರ, ಹೊಸಮನೆ ಭದ್ರಾವತಿ,
4) ದುರ್ಗಾ @ ಸಣ್ಣದುರ್ಗಾ, 29 ವರ್ಷ, ಭೋವಿ ಕಾಲೋನಿ, ಭದ್ರಾವತಿ,
5) ಸುಶೀಲಮ್ಮ, 66 ವರ್ಷ, ಹನುಮಂತ ನಗರ, ಹೊಸಮನೆ ಭದ್ರಾವತಿ
ಭದ್ರಾವತಿ ಹೊಸಮನೆ, ಭೋವಿ ಕಾಲೋನಿಯ ಐವರು ಮಹಿಳೆಯರು ಅರೆಸ್ಟ್ ...
ದುರ್ಗಾಳ ಮೇಲಿದೆ 17 ಕೇಸ್
ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬಂದು ಸಾಗರ ಹೊರಟಿದ್ದ ಈ ಲೇಡಿಸ್ ಗ್ಯಾಂಗ್ ರೆಡ್ ಹ್ಯಾಂಡ್ ಆಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಎದುರೇ ಪೊಲೀಸರಿಗೆ ಸಿಕ್ಕಿಬಿದ್ದಿತ್ತು. ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದ ಪೊಲೀಸರಿಗೆ ಆಶ್ಚರ್ಯವಾಗಿದ್ದು ಇವರೆಲ್ಲಾ ರಾಜ್ಯ ಸಂಚಾರಿ ಕಳ್ಳಿಯರು ಎಂಬ ವಿಷಯ. ಹೌದು, ಐವರು ಲೇಡಿಸ್ ಗ್ಯಾಂಗ್‌ನ ಪೈಕಿ ದುರ್ಗಾ ಅಲಿಯಾಸ್ ಸಣ‍್ಣ ದುರ್ಗಾರ ಒಬ್ಬಳ ವಿರುದ್ಧವೇ ರಾಜ್ಯದ ವಿವಿಧ ಠಾಣೆಗಳಲ್ಲಿ 17 ಕೇಸ್‌ಗಳಿವೆ. ಮೀನಾಕ್ಷಿಯ ವಿರುದ್ಧ ಏಳು ಕೇಸ್‌ಗಳಿವೆ. ಉಳಿದವರ ಜಾತಕವನ್ನ ಹುಡುಕಾಡಲಾಗುತ್ತಿದೆ.
ಅಕ್ಕ ತಂಗಿ ಚಿಕ್ಕಮ್ಮ ಸವತಿ
ಹೆಚ್ಚುಕಮ್ಮಿ ಈ ಗ್ಯಾಂಗ್‌ನಲ್ಲಿರುವ ಮಹಿಳೆಯರೆಲ್ಲರು ಪರಸ್ಪರ ಸಂಬಂಧಿಕರು. ಶಾಂತಿ ಮೀನಾಕ್ಷಿ ಸಾವಿತ್ರಿ ಅಕ್ಕತಂಗಿಯರು. ಈ ಪೈಕಿ ಶಾಂತಿ ಸಾವಿತ್ರಿಗೂ ಒಬ್ಬರೆ ಪತಿ. ಸುಶೀಲಮ್ಮ ಇವರ ಚಿಕ್ಕಮ್ಮ ಸಣ್ಣದುರ್ಗಾ ನೆರೆಹೊರೆಯವರು. ಇವರ ವೃತ್ತಿ ಪ್ರವೃತ್ತಿ ಎರಡು ಸಹ ಕಳ್ಳತನ.. ತಮ್ಮ ತಮ್ಮಲ್ಲೆ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದ ಟೀಂ ಆಧಾರ್ ಕಾರ್ಡ್ ಹಿಡಿದು ಕೊಂಡು ಸಿಕ್ಕ ಸಿಕ್ಕ ಬಸ್ ಹತ್ತಿ ಉಚಿತ ಪ್ರಯಾಣ ಮಾಡುತ್ತಿದ್ದರು. ಜೊತೆಯಲ್ಲಿಯೇ ಕಳ್ಳತನ ಮಾಡುತ್ತಿದ್ದರು. ಫ್ರೀ ಟಿಕೆಟ್‌ನಲ್ಲಿ ದಿನವಿಡಿ ಟ್ರಾವೆಲಿಂಗ್ ಮಾಡಿಕೊಂಡು ಯಾರದ್ದೋ ವ್ಯಾನಿಟಿ ಬ್ಯಾಗ್‌ನಲ್ಲಿರುವ ಚಿನ್ನ ದುಡ್ಡನ್ನ ಎಗರಿಸುತ್ತಿದ್ದರು. ಸದ್ಯ ಆಸ್ ದಿ ರೂಲ್ಸ್ ಪ್ರಕಾರ, ಲೇಡಿಸ್ ಗ್ಯಾಂಗ್‌ನ್ನ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಆದರೆ ಲೇಡಿಸ್ ಗ್ಯಾಂಗ್‌ನಲ್ಲಿ ಇನ್ನಷ್ಟು ಕಳ್ಳತನ ಕೇಸ್‌ನ ಸೀಕ್ರೆಟ್‌ಗಳು ಬಾಕಿ ಉಳಿದಿವೆ. ಅವುಗಳನ್ನ ಹೊರತರಲು ವಿವಿಧ ಸ್ಟೇಷನ್‌ಗಳ ಪೊಲೀಸರು ಮುಂದಾಗಿದ್ದಾರೆ.
ಒಟ್ಟಾರೆ, ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳತನದ ಮೇನ್ ರೂವಾರಿಗಳಾದ ಐವರು ಮಹಿಳೆಯರು ಸದ್ಯ ಅಂದರ್ ಆಗಿದ್ದಾರೆ. ಪ್ರೀ ಬಸ್ ಟಿಕೆಟ್ ಸೌಲಭ್ಯದೊಂದಿಗೆ ಪ್ರಯಾಣಿಕರ ಹಣ ಒಡವೆ ಎಗರಿಸ್ತಿದ್ದವರು ತಮಗೆ ಗೊತ್ತಿಲ್ಲದಂತೆ ಪೊಲೀಸ್ ಠಾಣೆಯ ಮುಂದೆಯೇ ಲಾಕ್ ಆಗಿದ್ದಾರೆ. ಇವರ ಅರೆಸ್ಟ್ ಇನ್ನಷ್ಟು ಕಳ್ಳಿಯರಿಗೆ ಭಯ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ. ಆದಾಗ್ಯು. ಹೆಬ್ಯಿಚ್ಯುಲ್ ಅಪರಾಧಿಗಳು ಜೈಲಿನಿಂದ ಸುಲಭವಾಗಿ ಹೊರಕ್ಕೆ ಬರದಂತೆ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ದೊಡ್ಡಪೇಟೆ ಪೊಲೀಸ್ ಟೀಂ
ರವಿ ಪಾಟೀಲ್, ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ , ನಾಗರಾಜ್ ಎಎಸ್ಐ, ಹೆಚ್ ಸಿ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ದೀಪಾ ಎಸ್ ಹುಬ್ಬಳಿ, ಪೂಜಾ, ಸುಮಿತ್ರಾಬಾಯಿ, ಲಕ್ಷ್ಮಿ ...