KARNATAKA NEWS/ ONLINE / Malenadu today/ Aug 10, 2023 SHIVAMOGGA NEWS
ದಿನಾಂಕ: 06/08/2023 ರಂದು ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಿ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿನ ಡೀಸೆಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಭದ್ರಾವತಿ ನಗರದ ಮಾವಿನ ಕೆರೆ ವಾಸಿಯಾದ ಮಹೇಶ್ ರವರು ನೀಡಿದ್ದ ದೂರಿನನ್ವಯ ಐಪಿಸಿ 379 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾ ತಂಡ ರಚನೆ
ಪ್ರಕರಣದ ಕುರಿತಾಗಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಜಿತೇಂದ್ರ ಕುಮಾರ್ ದಯಾಮ, ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪ ವಿಭಾಗ ಮತ್ತು ಶ್ರೀಶೈಲ ಪೊಲೀಸ್ ವೃತ್ತ ನಿರೀಕ್ಷಕರು, ಭದ್ರಾವತಿ ನಗರ ವೃತ್ತ ರವರ ಮೇಲ್ವಿಚಾರಣೆಯಲ್ಲಿ, ಶರಣಪ್ಪ ಹಂಡ್ರುಗಲ್ ಪೊಲೀಸ್ ಉಪ ನಿರೀಕ್ಷಕರು, ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಹೆಚ್.ಸಿ ಹಾಲಪ್ಪ, ಮಧುಪ್ರಸಾದ್ ಹಾಗೂ ಸಿಪಿಸಿ ನಾರಾಯಣಸ್ವಾಮಿ, ಮೌನೇಶ್, ರಾಘವೇಂದ್ರ, ರುದ್ರಪ್ಪ ರವರಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಆರೋಪಿ ಬಂಧನ
ಸದ್ಯ ಪೊಲೀಸ್ ತನಿಖಾ ತಂಡವು ದಿನಾಂಕಃ 9/8/2023 ರಂದು ಪ್ರಕರಣದ ಆರೋಪಿತರಾದ 1) ಸೋನು, 24 ವರ್ಷ, ಟಿಪ್ಪು ನಗರ ಶಿವಮೊಗ್ಗ ಮತ್ತು 2) ನೂರುಲ್ಲಾ, 24 ವರ್ಷ, ಟಿಪ್ಪು ನಗರ ಶಿವಮೊಗ್ಗ ರನ್ನ ದಸ್ತಗಿರಿ ಮಾಡಿ, ಆರೋಪಿರಿಂದ ಅಂದಾಜು ಮೌಲ್ಯ 15,000/- ರೂಗಳ 150 ಲೀಟರ್ ಡೀಸೆಲ್ ತುಂಬಿದ ಕ್ಯಾನುಗಳು ಮತ್ತು ಕೃತ್ಯಕ್ಕೆ ಉಪಯೋಗಿಸಲಾದ ಅಂದಾಜು ಮೌಲ್ಯ 7,00,000/- ರೂಗಳ ಅಶೋಕ ಲೈಲ್ಯಾಂಡ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. .
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ ರೈಲ್ವೆ ಪೊಲೀಸರು!
ರೈಲ್ವೆ ಸ್ಟೇಷನ್ಗಳಲ್ಲಿ ರೈಲ್ವೆ ಪೊಲೀಸರು ಪ್ರಯಾಣಿಕರು ರೈಲುಗಳಲ್ಲಿ ಗೊತ್ತಾಗದೆ ಬಿಟ್ಟು ಹೋದ ವಸ್ತುಗಳನ್ನು ಹಿಂತಿರುಗಿಸುತ್ತಿರುತ್ತಾರೆ. ಅಷ್ಟೆಅಲ್ಲದೆ ರೈಲ್ವೆ ಪೊಲೀಸರು ಸ್ಟೇಷನ್ ವ್ಯಾಪ್ತಿಯಲ್ಲಿ ಓಡಾಡುವ ಅನುಮಾನಸ್ಪದ ವ್ಯಕ್ತಿಗಳು ಹಾಗೂ ಪ್ರಯಾಣಿಕರಲ್ಲ ಎಂದೆನಿಸುವ ಅಪ್ರಾಪ್ತರ ಬಗ್ಗೆ ನಿಗಾವಹಿಸಿರುತ್ತಾರೆ. ಹೀಗೆ ನಿಗಾವಹಿಸಿದ ಸಂದರ್ಭದಲ್ಲಿ ಹಲವು ಸಲ, ಕಾಣೆಯಾದವರು ಸಹ ಪತ್ತೆಯಾಗಿದ್ದಾರೆ. ಸದ್ಯ ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗ ರೈಲ್ವೆ ಪೊಲೀಸ್ ಸ್ಟೇಷನ್ ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬರು ಪತ್ತೆಯಾಗಿದ್ದು, ಆಕೆಯನ್ನು ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ.
ಈ ಬಗ್ಗೆ ರೈಲ್ವೆ ಇಲಾಖೆ ಟ್ವೀಟ್ ಮಾಡಿದ್ದು, ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 16 ವರ್ಷದ ಬಾಲಕಿಯನ್ನ ರೈಲ್ವೆ ಪೊಲೀಸರು ಸಂರಕ್ಷಣೆ ಮಾಡಿದ್ದಾರೆ. ಸುರಕ್ಷಿತವಾಗಿ ಆಕೆಯನ್ನು ಸುರಬಿ ಉಜ್ವಲ ಕೇಂದ್ರಕ್ಕೆ ರವಾನಿಸಿ, ಆಶ್ರಯ ಒದಗಿಸಲಾಗಿದ್ದು, ಅಲ್ಲಿ ಆಕೆಯ ವಿಚಾರಣೆಯು ನಡೆಯುತ್ತಿದೆ.
ಅಪರಿಚಿತ ಮಹಿಳೆಯ ಓಡಾಟ, ಊರಲ್ಲಿ ಅನುಮಾನ!
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಸೊರಬ ಪೊಲೀಸ್ ಸ್ಟೇಷನ್ (Soraba Police Station) ವ್ಯಾಪ್ತಿಯಲ್ಲಿ ಬರುವ ಹಿರಲೇ ಗ್ರಾಮದಲ್ಲಿ ಅಪರಿಚಿತ ಮಹಿಳೆಯೊಬ್ಬರು ಓಡಾಡುತ್ತಿರುವುದು ಊರಿನಲ್ಲಿ ಅನುಮಾನ ಮೂಡಿಸಿತ್ತು. ಇನ್ನೂ ಮಹಿಳೆಯನ್ನು ವಿಚಾರಿಸಿದ ಊರಿನವರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ, ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ತಕ್ಷಣ ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಪೊಲೀಸರು ಶಿಫ್ಟ್ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು
