ಸೀತಾಕಟ್ಟೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ಜೋಗದ ಗುಂಡಿಗೆ ಹಾರಿದನಾ ಯುವಕ? JOGFALLS ನಲ್ಲಿ ನಡೆದಿದ್ದೇನು?
DID a young man jump into jogfalls after making a selfie video in Sitakatte?

SHIVAMOGGA | MALENADUTODAY NEWS | Jul 22, 2024
ಬೆಂಗಳೂರಿನಿಂದ ಜೋಗಕ್ಕೆ ಬಂದ ಗದಗ ಮೂಲದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ಎದುರಾಗಿದೆ. ಕಳೆದ ಆರು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಜೋಗಕ್ಕೆ ಬಂದ ಯುವಕ ಯಾತ್ರಿ ನಿವಾಸದ ಬಳಿ ಬರುವ ಸೀತಾಕಟ್ಟೆ ಸೇತುವೆ ಸಮೀಪ ಬೇಲಿ ದಾಟಿ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋವೊಂದನ್ನ ಮಾಡಿದ್ದಾನೆ. ಆ ಬಳಿಕ ಆತ ನೀರಿಗೆ ಹಾರಿದ್ದಾನೆ ಎನ್ನಲಾಗಿದೆ.
ಜೋಗ ಜಲಪಾತ ನೋಡಲು ಬೆಂಗಳೂರಿನಿಂದ ಬಂದಿದ್ದ ಯವಕ ನಾಪತ್ತೆ
ಸೆಲ್ಫಿ ವಿಡಿಯೊದಲ್ಲಿ ಏನಿದೆ
ಇನ್ನೂ ಆನಂದ್ ಎಂಬಾತ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಸದ್ಯ ಸೀತಾಕಟ್ಟೆ ಸೇತುವೆ ಬಳಿಯಲ್ಲಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಆದರೆ ಪ್ರತಿಕೂಲ ವಾತಾವರಣದಿಂದ ಹುಡುಕಾಟ ಪಲಫ್ರದವಾಗಲಿಲ್ಲ. ಮೇಲಾಗಿ ಡ್ರೋನ್ ಮೂಲಕ ಹುಡುಕಾಟ ನಡೆಸುವ ಪ್ರಯತ್ನಕ್ಕೂ ಮಳೆ ಹಾಗೂ ಮಂಜು ಅಡ್ಡಿಯಾಗುತ್ತಿದೆ ಎಂದು ಗೊತ್ತಾಗಿದೆ.
ಇನ್ನೂ ಸಾಯುವುದಕ್ಕೂ ಮೊದಲು ಸೆಲ್ಫಿ ವಿಡಿಯೋ ಮಾಡಿ ಯುವಕ ತಮ್ಮರೊಬ್ಬರಿಗೆ ಕಳುಹಿಸಿದ್ದ ಎನ್ನಲಾಗಿದ್ದು ಆ ದೃಶ್ಯವು ಸಹ ಪೊಲೀಸರ ಕೈ ಸೇರಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಮ್ಮ ಕುಟುಂಬಸ್ಥರ ವಿಚಾರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಉಳಿದಂತೆ ತನಿಖೆ ಪ್ರಗತಿಯಲ್ಲಿದೆ