ತೀರ್ಥಹಳ್ಳಿ ಎಳ್ಳಾಮಾವಾಸ್ಯೆ ಜಾತ್ರೆ ದಿನಾಂಕ ಗೊತ್ತಾಯ್ತಾ? ತೆಪ್ಪೋತ್ಸವ ಯಾವಾಗ ಗೊತ್ತಾ
date of the Yellamavasya jatre, Thirthahalli , teppotsava New Years Day,
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ಶಿವಮೊಗ್ಗ | ತೀರ್ಥಹಳ್ಳಿಯಲ್ಲಿ ಈ ಸಲ ಎಳ್ಳಮಾವಾಸ್ಯೆ ಜಾತ್ರೆಯ ದಿನಾಂಕ ಅಧಿಕೃತಗೊಂಡಿದೆ. ಹೊಸವರ್ಷದ ದಿನವೇ ಇಲ್ಲಿ ತೆಪ್ಪೋತ್ಸವ ನಡೆಯಲಿದೆ.
ತೀರ್ಥಹಳ್ಳಿಯ ಪ್ರಸಿದ್ಧ ರಾಮೇಶ್ವರ ದೇವರ ಜಾತ್ರೆಗೆ ದಿನಾಂಕ ನಿಗದಿಯಾಗಿದ್ದು, ಡಿಸೆಂಬರ್ 30 ರಂದು ಜಾತ್ರೆ ಆರಂಭವಾಗಲಿದೆ. ಮೊದಲ ದಿನ ತೀರ್ಥಸ್ನಾನ ನಡೆಯಲಿದೆ.
ಮರುದಿನ ಅಂದರೆ ಡಿಸೇಂಬರ್ 31 ರಂದು ರಥೋತ್ಸವ ನಡೆಯಲಿದೆ. ರಾಮೇಶ್ವರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ರಥೋತ್ಸವ ಆಚರಿಸಲಾಗುತ್ತದೆ.
ನಂತರದ ದಿನ ಅಂದರೆ ಹೊಸವರ್ಷದ ಮೊದಲ ದಿನ ತೀರ್ಥಹಳ್ಳಿಯಲ್ಲಿ ತುಂಗಾ ನದಿ ತೀರದಲ್ಲಿ ತೆಪ್ಪೋತ್ಸವ ನಡೆಯಲಿದೆ. ತೆಪ್ಪದಲ್ಲಿ ರಾಮೇಶ್ವರ ದೇವರ ಉತ್ಸವ ಮೂರ್ತಿಯನ್ನು ಇರಿಸಿ ತುಂಗಾನದಿಯಲ್ಲಿ ಮೂರು ಸುತ್ತು ಬರಲಾಗುತ್ತದೆ. ಆ ಬಳಿಕ ಸಿಡಿಮದ್ದಿನ ಪ್ರದರ್ಶನ ಇರುತ್ತದೆ.
SUMMARY | date of the Yellamavasya fair in Thirthahalli has been confirmed this time. The festival will be held here on New Year's Day.
KEYWORDS | date of the Yellamavasya jatre, Thirthahalli , teppotsava New Years Day,