Dasara festival : ಬಾನು ಮುಷ್ತಾಕ್ ಚಾಮುಂಡಿ ದೇವಿಗೆ ಪೂಜೆ ಮಾಡಿ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಜನರ ಮುಂದೆ ಸ್ಪಷ್ಟೀಕರಣ ನೀಡಿದರೆ ದಸರಾ ಉದ್ಘಾಟನೆಗೆ ಯಾವುದೇ ತೊಂದರೆ ಇಲ್ಲ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದಸರಾ ಉದ್ಘಾಟನೆಗೆ ಮುಖ್ಯಮಂತ್ರಿಗಳು ಬಾನು ಮುಷ್ತಾಕ್ ರವರವರಿಗೆ ಉದ್ಘಾಟನೆ ಮಾಡಲು ಹೇಳಿದ್ದಾರೆ. ಇದರ ಬಗ್ಗೆ ನಾನು ಟೀಕೆ ಮಾಡಲು ಇಷ್ಟ ಪಡುವುದಿಲ್ಲ. ನಮ್ಮ ರಾಜ್ಯದಲ್ಲಿ ದಸರಾವನ್ನು ಬಹಳಾ ವೈಭವದಿಂದ ನಡೆಸಲಾಗುತ್ತದೆ. ಭಾನು ಮುಸ್ತಾಕ್ ಗೆ ಈ ಬಗ್ಗೆ ಆಸಕ್ತಿ ಇದ್ದು ಒಪ್ಪಿಕೊಂಡಿದ್ದರೆ ತೊಂದರೆ ಇಲ್ಲ. ಈ ಕುರಿತು ಬಾನು ಮುಷ್ತಾಕ್ ಚಾಮುಂಡಿ ದೇವಿಗೆ ಪೂಜೆ ಮಾಡಿ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಜನರ ಮುಂದೆ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದರೆ ಮುಖ್ಯ ಮಂತ್ರಿಗಳು ಹಾಗೂ ಭಾನು ಮುಸ್ತಾಕ್ ರವರು ಹಿಂದೂಗಳಿಗೆ ಅಪಮಾನ ಮಾಡಿದಂತೆ ಆಗುತ್ತದೆ ಎಂದರು.
- Advertisement -
Dasara festival
TAGGED:Dasara festival

