ಸೆಪ್ಟಂಬರ್ 06 ರಂತೆ ಭದ್ರಾ, ಲಿಂಗನಮಕ್ಕಿ ಮತ್ತು ತುಂಗಾ ಜಲಾಶಯಗಳ ಇಂದಿನ ಒಳಹರಿವು, ಹೊರಹರಿವು ಮತ್ತು ನೀರಿನ ಸಂಗ್ರಹದ ಮಾಹಿತಿ ಹೀಗಿದೆ
Dam water level ಭದ್ರಾ ಜಲಾಶಯ
ಭದ್ರ ಜಲಾಶಯದ ಒಳಹರಿವು 15,342 ಕ್ಯೂಸೆಕ್ ಇದ್ದು, ಹೊರಹರಿವು 14,139 ಕ್ಯೂಸೆಕ್ ಇದೆ. ಭದ್ರಾ ಜಲಾಶಯದ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 71.535 ಟಿಎಂಸಿ. ಪ್ರಸ್ತುತ ಜಲಾಶಯದ ಮಟ್ಟ 184 ಅಡಿ 4 ಇಂಚು (MSL ಪ್ರಕಾರ 2156.33). ನೀರಿನ ಸಂಗ್ರಹ 69.450 ಟಿಎಂಸಿ ಇದೆ.
ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿಯ ಒಳ ಹರಿವು 11,596 ಕ್ಯೂಸೆಕ್ ಇದ್ದು,8,910 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನೀರಿನ ಮಟ್ಟ 1817.75 ಅಡಿ ಇದೆ.
ತುಂಗಾ ಜಲಾಶಯ
ತುಂಗಾ ಜಲಾಶಯಕ್ಕೆ ಒಟ್ಟು ಒಳಹರಿವು 19,756 ಕ್ಯೂಸೆಕ್ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್. ಪ್ರಸ್ತುತ ಡ್ಯಾಂ ಮಟ್ಟ 588.17 ಮೀಟರ್ ಇದ್ದು, 2.365 ಟಿಎಂಸಿ ನೀರು ಸಂಗ್ರಹವಾಗಿದೆ.

