ಟೆಲಿಗ್ರಾಂನಿಂದ ಬಂತೊಂದು ಮೆಸೇಜ್​ : ನಂಬಿದ ಮಂಡಗದ್ದೆಯ ಯುವತಿ ಕಳೆದುಕೊಂಡ ಹಣವೆಷ್ಟು ಗೊತ್ತಾ..

prathapa thirthahalli
Prathapa thirthahalli - content producer

Cyber crime today : ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಜನರಿಗೆ ಇಂತಿಷ್ಟು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಆಮಿಷವೊಡ್ಡಿ, ಅವರಿಂದ ಹಣ ಹಾಕಿಸಿಕೊಂಡು ವಂಚಕರು ಮೋಸ ಮಾಡುತ್ತಿದ್ದಾರೆ. ಅದರಂತೆಯೇ, ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಯುವತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು, 2,28,170 ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ಹೌದು, ಮಂಡಗದ್ದೆಯ ಯುವತಿಯೊಬ್ಬರು ಟೆಲಿಗ್ರಾಂನಲ್ಲಿ ನೋಡುತ್ತಿದ್ದಾಗ, ‘ವರ್ಕ್ ಫ್ರಂ ಹೋಂ’ ಎಂಬ ಜಾಹೀರಾತು ಕಾಣಿಸಿದೆ. ಅದನ್ನು ಕ್ಲಿಕ್ ಮಾಡಿದಾಗ ಅಪರಿಚಿತ ಖಾತೆಯೊಂದಕ್ಕೆ ಜಾಯಿನ್ ಆಗಿದ್ದಾರೆ. ಅದರಲ್ಲಿ, ಮನೆಯಲ್ಲಿಯೇ ಹಲವು ವಸ್ತುಗಳನ್ನು ಪ್ರಮೋಟ್ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ವಂಚಕರು ನಂಬಿಸಿದ್ದಾರೆ. ಇದನ್ನು ನಂಬಿದ ಯುವತಿ, ವಂಚಕರಿಗೆ ಹಂತ ಹಂತವಾಗಿ 2,28,170 ರೂಪಾಯಿ ಹಣವನ್ನು ನೀಡಿದ್ದಾರೆ. ನಂತರ ವಂಚಕರು ಲಾಭಾಂಶವನ್ನೂ ನೀಡದೆ, ಅಸಲು ಹಣವನ್ನೂ ಹಿಂದಿರುಗಿಸದೆ ಮೋಸ ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಯುವತಿ ವಂಚಕರನ್ನು ಪತ್ತೆ ಹಚ್ಚುವಂತೆ ಶಿವಮೊಗ್ಗದ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Cyber crime today

TAGGED:
Share This Article