cyber crime : ಶಿವಮೊಗ್ಗ ಜಿಲ್ಲೆಯ ನವನಗರದ ವ್ಯಕ್ತಿಯೊಬ್ಬರು ವ್ಯಾಟ್ಸಪ್ನಲ್ಲಿ ಬಂದ ಮೇಸೆಜ್ ಒಂದನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.
ಹೌದು ನವನಗರದ ನಿವಾಸಿಯೊಬ್ಬರು ಹೀಗೆ ಮೊಬೈಲ್ ನೋಡುತ್ತಿರುವಾಗ. ಅಪರಿಚಿತ ಹೂಡಿಕೆ ಕಂಪನಿಯೊಂದರಿಂದ ಮೆಸೇಜ್ ಬಂದಿದೆ. ಅದನ್ನು ಗಮನಿಸಿದಾಗ ಕಂಪನಿಯವರು ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ದುರುದಾರರಿಗೆ ನಂಬಿಸಿದ್ದಾರೆ. ಇದರಿಂದ ದೂರುದಾರರು ಲಾಭಾಂಶದ ಆಸೆಯಿಂದ ಅದನ್ನು ನಂಬಿ ಕಂಪನಿಯ ಅಪರಿಚಿತರು ನೀಡಿದ ಬ್ಯಾಂಕ್ ಖಾತೆಗೆ 2 ಲಕ್ಷ ಹಣವನ್ನು ಕಳುಹಿಸಿದ್ದಾರೆ. ನಂತರ ಅಪರಿಚಿತ ಕಂಪನಿ ಲಾಭಾಂಶ ಹಾಗೂ ಹಾಕಿದ ಹಣವನನ್ನೂ ನೀಡಲಿಲ್ಲ ಎಮದು ದುರುದಾರರು ಆರೋಪಿಸಿದ್ದಾರೆ
ಈ ಹಿನ್ನೆಲೆ ವಂಚನೆ ಮಾಡಿದ ಕಂಪನಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳವಂತೆ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
cyber crime
TAGGED:Cyber Crime

