ವಿಷ ಕುಡಿದ ದಂಪತಿ | ಮೆಗ್ಗಾನ್‌ಗೆ ಕರೆ ತರುವ ವೇಳೆ ಸಾವು | ಮಕ್ಕಳಿಲ್ಲದಿರುವುದೇ ಕಾರಣವಾಯ್ತಾ?

couple in Malligenahalli, Nyamathi Taluk, committed suicide

ವಿಷ ಕುಡಿದ ದಂಪತಿ | ಮೆಗ್ಗಾನ್‌ಗೆ ಕರೆ ತರುವ ವೇಳೆ ಸಾವು | ಮಕ್ಕಳಿಲ್ಲದಿರುವುದೇ ಕಾರಣವಾಯ್ತಾ?
Malligenahalli, Nyamathi Taluk,

SHIVAMOGGA | MALENADUTODAY NEWS |  Jul 23, 2024

30 ವರ್ಷವಾದರೂ ಮಕ್ಕಳಾಗಿಲ್ಲ ಅಂತಾ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ. ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗುತ್ತಿರುವ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.   ಷಣ್ಮುಖಪ್ಪ (62) ಇಂದ್ರಮ್ಮ(50) ಮೃತರು

ಸಾಗರದ ಆ ಹೊಳೆಯಲ್ಲಿ ನಡೆದಿದ್ದೇನು? | ತಾಯಿ & ಮಕ್ಕಳನ್ನ ಉಳಿಸಿದ ಪೊಲೀಸರು ಯಾರು? ನಡೆದ ಘಟನೆ



ಮದುವೆಯಾಗಿ 30 ವರ್ಷವಾದರು ಮಕ್ಕಳಿಲ್ಲ ಎಂಬ ಚಿಂತೆಯಲ್ಲಿ ಇಬ್ಬರು ಖಿನ್ನತೆಗೆ ಒಳಗಾಗಿದ್ದು. ಈ ಹಿನ್ನೆಲೆಯಲ್ಲಿ ವಿಷಪೊರಿತ ಮಾತ್ರೆ ನುಂಗಿದ್ದಾರೆ. ಆ ಬಳಿಕ ನೋವು ತಡೆಯಲಾಗದೇ ಕೂಗಿದ್ದಾರೆ. ಅವರ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಇಬ್ಬರನ್ನು ನ್ಯಾಮತಿ ಸರ್ಕಾರಿ ಆಸ್ಪತ್ರೆಗೆ ಗಂಡ ಹೆಂಡತಿಯನ್ನ ದಾಖಲಿಸಿದ್ದಾರೆ. ಆ ಬಳಿಕ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಇಬ್ಬರನ್ನ ಶಿಫ್ಟ್‌ ಮಾಡಲಾಗಿದೆ. ಅಷ್ಟರಲ್ಲಿ ಪತ್ನಿ ಸಾವನ್ನಪ್ಪಿದ್ದಾರೆ. ಇನ್ನೂ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲಿ ಪತಿಯು ಸಾವನ್ನಪ್ಪಿದ್ದಾರೆ

couple in Malligenahalli, Nyamathi Taluk, committed suicide after being childless for 30 years. Shanmukhappa (62) and Indramma (50) ingested