ಭಜನೆ ವೇಳೆ ಸರ ಕದ್ದ ವೈರಲ್ ವಿಡಿಯೋ ಕೇಸ್ | ಶಿವಮೊಗ್ಗದ ಮೆಕಾನಿಕ್ , ಭದ್ರಾವತಿಯ COOK ಬೆಂಗಳೂರಲ್ಲಿ ಅರೆಸ್ಟ್!
cook and a mechanic specialised in snatching gold chains of pious women immersed in singing bhajans by sitting next to windows in temples have been arrested
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 29, 2024
ದೇವಾಲಯವೊಂದರಲ್ಲಿ ಭಜನೆ ಮಾಡುತ್ತಿದ್ದ ಸಂದರ್ಭದಲ್ಲಿ ಕಿಟಿಕಿಯಿಂದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ದೋಚಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಜಿಲ್ಲೆಯ ಇಬ್ಬರನ್ನ ಅರೆಸ್ಟ್ ಮಾಡಿದ್ದಾರೆ. ಇಡೀ ಪ್ರಕರಣ ಕುತೂಹಲ ಮೂಡಿಸುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ
ಬೆಂಗಳೂರು ಶಂಕರಪುರಂನ ಗಣೇಶ ದೇವಸ್ಥಾನದಲ್ಲಿ ಕಳೆದ ಅಕ್ಟೋಬರ್ 11 ರ ರಾತ್ರಿ ಸಾಮೂಹಿಕ ಭಜನೆ ನಡೆಯುತ್ತಿತ್ತು. ಈ ವೇಳೆ ಮಹಿಳೆಯೊಬ್ಬರ ಸರವನ್ನ ಕಿಟಕಿ ಮೂಲಕ ಇಬ್ಬರು ಕಿತ್ತೊಯ್ಯುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ಬಳಿಕ ಈ ವಿಡಿಯೊ ಶಿವಮೊಗ್ಗದ್ದು ಎಂಬಂತೆ ವೈರಲ್ ಆಗಿತ್ತು. ಬಳಿಕ ಬೆಂಗಳೂರು ಪೊಲೀಸರು ದೃಶ್ಯ ನಂದಿನಿ ಲೇ ಔಟ್ ಪೊಲೀಸ್ ಸ್ಟೇಷನ್ ಲಿಮಿಟ್ಸ್‌ನಲ್ಲಿ ನಡೆದ ಘಟನೆ ಎಂದು ಸ್ಪಷ್ಟಪಡಿಸಿದ್ದರು.
ಇದಾದ ಬಳಿಕ ಕೃತ್ಯ ನಡೆಸಿದ ಆರೋಪಿಗಳನ್ನ ಹುಡುಕಿ ಹೊರಟ ಪೊಲೀಸರಿಗೆ ಸಿಸಿ ಟಿವಿ ಪೂಟೇಜ್‌ನಿಂದ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸುಮಾರು 20 ದಿನಗಳವರೆಗೂ ಈಬಗ್ಗೆ ತಲಾಶ್ ಮಾಡಿದ ಪೊಲೀಸರಿಗೆ ಸ್ಥಳೀಯವಾಗಿರುವ ಬೇರೆ ಬೇರೆ ಸಿಸಿ ಟಿವಿ ಪೂಟೇಜ್‌ಗಳಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿರುವಂತೆ ಕಂಡು ಬಂದ ಇಬ್ಬರು ವ್ಯಕ್ತಿಗಳ ಬಗ್ಗೆ ಸಂಶಯ ಮೂಡಿದೆ. ಅವರ ಪೂರ್ವಪರ ವಿಚಾರಿಸಿದಾಗ, ಅವರು ಯಶವಂತ್‌ಪುರ ರೈಲ್ವೆ ಸ್ಟೇಷನ್‌ನಿಂದ ಶಿವಮೊಗ್ಗಕ್ಕೆ ಹೊರಟಿದ್ದು ಕಂಡು ಬಂದಿದೆ.
ಆ ಬಳಿಕ ನಂದಿನಿ ಲೇ ಔಟ್ ಪೊಲೀಸರು ಶಿವಮೊಗ್ಗಕ್ಕೆ ಬಂದಿದ್ದಾರೆ. ಇಲ್ಲಿಯ ಪೊಲೀಸರ ಸಹಾಯದಿಂದ ಸಸ್ಪೆಕ್ಟ್ಟ್ ಆರೋಪಿಗಳ ಫೋಟೋಗಳ ಮೂಲಕ ಅವರುಗಳ ಮನೆ ತಲುಪಿದ್ದಾರೆ. ಅಲ್ಲಿ ಕುಟುಂಬಸ್ಥರು, ಆರೋಪಿಗಳು ಬೆಂಗಳೂರಿಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಗೌಪ್ಯವಾಗಿ ಇನ್ನೊಂದಿಷ್ಟು ಮಾಹಿತಿ ಪಡೆದ ಪೊಲೀಸರು ಬೆಂಗಳೂರು ಕಂಠೀರವ ಸ್ಟುಡಿಯೋದ ಬಳಿ ಇಬ್ಬರನ್ನೂ ಟ್ರೇಸ್ ಮಾಡಿ ಅರೆಸ್ಟ್ ಮಾಡಿದ್ದಾರೆ.
ಇಬ್ಬರು ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಮೂರು ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿವೆ. ಕಂಠೀರವ ಸ್ಟುಡಿಯೋದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಓರ್ವ ಆರೋಪಿ, ಮೆಕಾನಿಕ್ ಕೆಲಸ ಮಾಡುವ ಇನ್ನೊಬ್ಬಾತನ ಜೊತೆಗೆ ಸೇರಿ ಈ ಕಳ್ಳತನ ಮಾಡುತ್ತಿದ್ದರು. ಆರ್ಥಿಕ ಸಮಸ್ಯೆ ಕಾರಣಕ್ಕೆ ಈ ಕೃತ್ಯಕ್ಕೆ ಇಳಿದಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿಕೊಂಡಿದ್ಧಾರೆ.
ಆರೋಪಿಗಳು : ಭದ್ರಾವತಿಯ ವಸಂತ (40) ಅಡುಗೆ ಕೆಲಸಗಾರ
: ಶಿವಮೊಗ್ಗ ದ ಅತೀಕ್ ಉಲ್ಲಾ (27) ಮೆಕ್ಯಾನಿಕ್
SUMMARY | cook and a mechanic specialised in snatching gold chains of pious women immersed in singing bhajans by sitting next to windows in temples have been arrested
KEY WORDS | cook and mechanic , snatching gold chains ̤ nandhini lay out police station , shivamogga , bhadravati,