ಬೆಜ್ಜವಳ್ಳಿ ಒಂದಕ್ಕೊಂದು ಡಿಕ್ಕಿಯಾಗಿ ಮೂರು ಪಲ್ಟಿಯಾದ ಕಾರು! ಏರ್ ಬ್ಯಾಗ್‌ನಿಂದ ಉಳಿಯಿತು ಜೀವ
Thirthahalli taluk witnessed a head-on collision between two cars at Bejjavalli in Theerthahalli taluk today.

SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 18, 2025
ತೀರ್ಥಹಳ್ಳಿ : ತಾಲೂಕಿನ ಬೆಜ್ಜವಳ್ಳಿಯಲ್ಲಿ ಸಮೀಪ ಇವತ್ತು ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದಷ್ಟೆ ಅಲ್ಲದೆ ಸಿನಿಮಾ ಸ್ಟೈಲ್‌ನಲ್ಲಿ ಕಾರೊಂದು ಮೂರು ಪಲ್ಟಿಯಾಗಿದೆ. ಅದೃಷ್ಟಕ್ಕೆ ಕಾರುಗಳಿದ್ದ ಏರ್‌ಬ್ಯಾಗ್ ಓಪನ್ ಆದ್ದರಿಂದ, ಕಾರಿನಲ್ಲಿದ್ದ ಸವಾರರಿಗೆ ಹೆಚ್ಚು ಅಪಾಯ ಆಗಿಲ್ಲ ಎಂದು ತಿಳಿದುಬಂದಿದೆ.
ಬೆಜ್ಜವಳ್ಳಿಯ ಸರ್ಕಲ್‌ನಿಂದ ಮುಂದಕ್ಕೆ ಸಾಗಿದರೆ ಸಿಗುವ ಮಂಜುಶ್ರೀ ಹೋಟೆಲ್ ಬಳಿಯಲ್ಲಿ ಘಟನೆ ನಡೆದಿದೆ. ಇವತ್ತು ಮಧ್ಯಾಹ್ನ ಹನ್ನೇರಡು ಗಂಟೆ ಸುಮಾರಿಗೆ, ಎರ್ಟಿಗಾ ಹಾಗೂ ವರ್ನಾ (verna car) ಕಾರಿನ ನಡುವೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಎರ್ಟಿಗಾ (ertiga car)ಪೂರ್ತಿ ಜಖಂಗೊಂಡಿದೆ.
ಎರ್ಟಿಗಾದಲ್ಲಿದ್ದವರು ಬೆಂಗಳೂರಿನಿಂದ ಬಂದವರಾಗಿದ್ದು ಶಿವಮೊಗ್ಗದಿಂದ ತೀರ್ಥಹಳ್ಳಿ ಮೇಲೆ ಕುಂದಾಪುರಕ್ಕೆ ಹೋಗುವವರಿದ್ದರು. ಇನ್ನು ವರ್ನಾ ಕಾರಿನಲ್ಲಿದ್ದವರು ಮಣಿಪಾಲ್‌ನಿಂದ ಬಂದವರಾಗಿದ್ದು, ಶಿವಮೊಗ್ಗಕ್ಕೆ ಹೋಗುವವರಿದ್ದರು. ಘಟನೆಯಲ್ಲಿ ವರ್ನಾ ಕಾರಿನ ಮುಂಭಾಗ ಜಖಂ ಆಗಿದೆ. ಇನ್ನೂ ಮಾಳೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ವಾಹನಗಳನ್ನು ರಸ್ತೆ ಬದಿಗೆ ಸರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದಾರೆ. ಈ ನಡುವೆ ಅಪಘಾತಕ್ಕೆ ಕಾರಣ ಸ್ಪಷ್ಟವಾಗಿಲ್ಲ.
SUMMARY | collision between two cars at Bejjavalli in Theerthahalli taluk today.
KEYWORDS | Thirthahalli, cars, accident,