ಭಾನುವಾರದ ಪ್ರಾರ್ಥನೆ ವೇಳೆ ಚರ್ಚ್‌ ಆವರಣದಲ್ಲಿ ನಡೆಯಿತು ಮಾಸ್‌ ಫೈಟ್‌ | ನಡೆದಿದ್ದೇನು?

clash in holehonnur church 

ಭಾನುವಾರದ ಪ್ರಾರ್ಥನೆ ವೇಳೆ ಚರ್ಚ್‌ ಆವರಣದಲ್ಲಿ ನಡೆಯಿತು ಮಾಸ್‌ ಫೈಟ್‌ | ನಡೆದಿದ್ದೇನು?
clash in holehonnur church 

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 10, 2025 ‌‌ 

ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಕ್ಯಾಂಪ್‌ ವೊಂದರಲ್ಲಿನ ಚರ್ಚ್‌ನಲ್ಲಿ ಹಣಕಾಸಿನ ವಿಚಾರಕ್ಕೆ ಎರಡು ಬಣಗಳ ನಡುವೆ ನಿನ್ನೆದಿನ ಹೊಡೆದಾಟವೇ ನಡೆದಿದೆ. ಚರ್ಚ್‌ನ್ನು ನೋಡಿಕೊಳ್ಳುತ್ತಿರುವ ಒಂದು ಗುಂಪು ಹಾಗೂ ಭಕ್ತರ ಪರವಾದ ಇನ್ನೊಂದು ಗುಂಪಿನ ನಡುವೆ ಚರ್ಚ್‌ಗೆ ಬಂದಿರುವ ಹಣಕಾಸಿನ ವಿಚಾರವಾಗಿ ವಿವಾದವಿತ್ತು. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ ನಡುವೆಯು ಚರ್ಚ್‌ನಲ್ಲಿ ಪ್ರತಿ ಭಾನುವಾರ ಪ್ರಾರ್ಥನೆ ಎಂದಿನಂತೆ ನಡೆದುಕೊಂಡು ಬಂದಿತ್ತು. 

ಚರ್ಚ್‌ನ ಆವರಣದಲ್ಲಿಯೇ ಹೊಡೆದಾಟ

ನಿನ್ನೆ ದಿನ ಚರ್ಚ್‍ನ (Church) ಹುಂಡಿ ಕಾಸಿನ ವಿಚಾರವಾಗಿ ವಿವಾದ ಭುಗಿಲೆದ್ದಿದೆ. ಅಲ್ಲದೆ ಮಾತಿಗೆ ಮಾತು ಬೆಳೆದು ಪರಸ್ಪರದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಓರ್ವನಿಗೆ ಗಂಭೀರ ಗಾಯವಾಗಿದೆ.

 ಇನ್ನೂ ಘಟನೆ ಸಂಬಂಧ ಭಕ್ತರು ಚರ್ಚ್‌ ಉಸ್ತುವಾರಿ ಹೊತ್ತಿರುವವರು ತಮ್ಮ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಹೊಳೆಹೊನ್ನೂರು ಪೊಲೀಸರು ವಿಚಾರಣೆ ನಡೆಸ್ತಿದ್ದು, ಚರ್ಚ್‌ ಬಳಿಯಲ್ಲಿ ಹೆಚ್ಚಿನ ಬಂದೋಬಸ್ತ್‌ ಮಾಡಿದ್ದಾರೆ.

  

SUMMARY | clash in holehonnur church 

KEY WORDS |‌   clash in holehonnur church