Cinema story : ಲವ್&ಆ್ಯಕ್ಷನ್ ಒಳಗೊಂಡಿರುವ ಓಂ ಶಿವಂ ಚಿತ್ರ ಸೆಪ್ಟಂಬರ್ 05 ಕ್ಕೆ ಬಿಡುಗಡೆ : ಚಿತ್ರದ ಬಗ್ಗೆ ನಿರ್ದೇಶಕರು ಹೇಳಿದ್ದೇನು.
ಯುವ ನಟ ಭಾರ್ವವ್ ಕೃಷ್ಣ ನಟನೆಯ ಲವ್ & ಅ್ಯಕ್ಷನ್ ಒಳಗೊಂಡಿರುವ ಓಂ ಶಿವಂ ಚಿತ್ರ ಇದೇ ಸೆಪ್ಟಂಬರ್ 05 ರಂದು ರಾಜ್ಯದಾಧ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ಅಲ್ವಿನ್ ಹೇಳಿದರು.
Cinema story ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇದೊಂದು ಲವ್ ಹಾಗೂ ಆ್ಯಕ್ಷನ್ ಒಳಗೊಂಡ ಚಿತ್ರವಾಗಿದೆ. ಒಬ್ಬಳು ತಂದೆ ಕಳೆದುಕೊಂಡ ಸಿಂಗಲ್ ಪೇರೆಂಟ್ಸ್ ಹುಡುಗಿ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ. ಹಾಗೆಯೇ ಇತ್ತೀಚಿನ ಯುವಜನತೆ ಮೊಬೈಲ್ನಿಂದ ಕಳುಹಿಸುವ ಸಂದೇಶದಿಂದ ಯಾವರೀತಿ ವಂಚಕರ ಬಲೆಗೆ ಬಿದ್ದು ಪೇಚಿಗೆ ಸಿಲುಕುತ್ತಾರೆ ಎಂಬೆಲ್ಲಾ ವಿಚಾರವನ್ನು ಇಟ್ಟುಕೊಂಟು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವನ್ನು ತೆಗೆದಿದ್ದೇವೆ ಎಂದರು.
ಈ ಚಿತ್ರದಲ್ಲಿ 04 ಹಾಡುಗಳಿವೆ, ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಸಾಹಿತ್ಯವನ್ನು ಬರೆದಿದ್ದು ಚಿತ್ರದ ಎಲ್ಲಾ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ. ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮೈಸೂರು ಮಂಗಳೂರು ಹಾಗೂ ಮಂಡ್ಯ ಭಾಗದಲ್ಲಿ ಚಿತ್ರೀಕರಿಸಿದ್ದು, ರಾಜ್ಯದಾದ್ಯಂತ ಈ ಚಿತ್ರ 90 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ಚಿತ್ರದ ನಾಯಕ ನಟ ಭಾರ್ಗವ್ ಮಾತನಾಡಿ ಇದು ನನ್ನ ಮೊದಲ ಚಿತ್ರವಾಗಿದ್ದು ನಾನು ಈ ಚಿತ್ರಕ್ಕೆ ಸುಮಾರು 08 ತಿಂಗಳುಗಳ ಕಾಲ ತರಬೇತಿ ಪಡೆದಿದ್ದೇನೆ. ಈ ಚಿತ್ರದಲ್ಲಿ ಅತಿಯಾದ ದುಡ್ಡು ಇಟ್ಟಿರುವ ಹುಡುಗ ಹಾಗೂ ಒಬ್ಬ ಸಿಂಗಲ್ ಪೇರೆಂಟ್ ಹುಡುಗಿ ಸಮಾಜದಲ್ಲಿ ಹೇಗಿರುತ್ತಾರೆ ಎಂಬುದರ ಕಥಾ ಹಂದರ ಇಟ್ಟುಕೊಂಡು ತೆಗೆದಿರುವ ಚಿತ್ರ ಇದಾಗಿದ್ದು ಉತ್ತಮವಾಗಿ ಮೂಡಿಬಂದಿದೆ ಎಂದರು.
ಈ ಚಿತ್ರಕ್ಕೆ ಕೆ ಎನ್ ಕೃಷ್ಣ ಬಂಡವಾಳವನ್ನು ಹೂಡಿದ್ದು, ವಿಜಯ್ ಯಾರ್ಡ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ.
Cinema story


