ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ | CID ವಿಚಾರಣೆಯಲ್ಲಿ ಏನೇನಾಯ್ತು

CID team led by DYSP Mohammad Rafi has started an investigation into the case and is conducting an inquiry at Chandrashekhar's house in Vinobanagar, Shivamogga.  

ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ | CID  ವಿಚಾರಣೆಯಲ್ಲಿ ಏನೇನಾಯ್ತು
Valmiki Development Corporation officer, Chandrashekhar suicide case

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣವನ್ನು ವಿಪಕ್ಷಗಳು ಸರ್ಕಾರದ ವೈಫಲ್ಯ ಎಂದು ಬಿಂಬಿಸಿದೆಯಷ್ಟೆ ಅಲ್ಲದೆ ಈ ಸಂಬಂಧ ಪ್ರತಿಭಟನೆ ನಡೆಸ್ತಿದೆ. ಇದರ ನಡುವೆ ಸರ್ಕಾರ ಪ್ರಕರಣವನ್ನು ಸಿಇಡಿಗೆ ನೀಡಿದೆ. ಸಿಐಡಿ ಅಪರಾಧ ವಿಭಾಗದ ಡಿವೈಎಸ್‌ಪಿ  ಮೊಹಮ್ಮದ್‌ ರಫಿಯವರ ನೇತೃತ್ವದ ಟೀಂ ಕೇಸ್‌ನ ತನಿಖೆಯನ್ನು ಆರಂಭಿಸಿದ್ದು, ಶಿವಮೊಗ್ಗದ ವಿನೋಬನಗರದಲ್ಲಿರುವ ಚಂದ್ರಶೇಖರ್‌ರವರ ಮನೆಯಲ್ಲಿ ವಿಚಾರಣೆ ನಡೆಸ್ತಿದೆ. 

ಇವತ್ತು ಬೆಳಗ್ಗೆ ಚಂದ್ರಶೇಖರ್‌ರವರ ನಿವಾಸಕ್ಕೆ ಭೇಟಿಕೊಟ್ಟ ಅಧಿಕಾರಿಗಳು ಅವರ ಕುಟುಂಬಸ್ಥರ ಬಳಿ ಹಲವು ಮಾಹಿತಿಗಳನ್ನು ಪಡೆದಿದ್ದಾರೆ. ಅಧಿಕಾರಿಗಳ ಜೊತೆಗೆ ಚಂದ್ರಶೇಖರ್‌ರವರು ಹೇಗಿದ್ದರು , ಅವರ ವ್ಯಕ್ತಿತ್ವ ಹೇಗಿತ್ತು, ಅವರು ನಡೆದಿರುವ ಅವ್ಯವಹಾರದ ಬಗ್ಗೆ ಮಾಹಿತಿಯನ್ನೇನಾದರೂ ನೀಡಿದ್ರಾ? ಹೀಗೆ ಕುಟುಂಬಸ್ಥರ ಬಳಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಇದರ ಜೊತೆಯಲ್ಲಿ ಕೇಸ್‌ಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು, ಸ್ಥಳ ಮಹಜರ್‌, ಸಾಕ್ಷ್ಯ ಸಂಗ್ರಹ ನಡೆಸಿದ್ದಾರೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ನಾಲ್ಕು ಗಂಟೆಗಳ ಇವತ್ತು ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ತನಿಖೆ ಹಾಗೂ ವಿಚಾರಣೆ ನಡೆಸ್ತಿದ್ದಾರೆ 

ಚಂದ್ರಶೇಖರ್‌ರವರಿಗೆ ಸೇರಿದ್ದು ಎನ್ನಲಾದ ಒಂದು ಪೆನ್‌ಡ್ರೈವ್‌ ಹಾಗೂ ಲ್ಯಾಪ್‌ ಟಾಪ್‌ ಮತ್ತು ಪ್ರಿಂಟರ್‌ ಹಾಗೂ ಡೆತ್‌ನೋಟ್‌ ಬರೆದಿದ್ದರೆನ್ನಲಾದ ಒಂದು ಪೆನ್‌ ಹಾಗೂ ಆರು ಪುಟದ ಡೆತ್‌ನೋಟ್‌, ಮೃತರ ಕೈ ಬರಹದ ಮಾದರಿಗಳನ್ನು ಜಪ್ತು ಮಾಡಿರುವ ಅಧಿಕಾರಿಗಳು ಚಂದ್ರಶೇಖರ್‌ರವರ ಪತ್ನಿಯವರ ಬಳಿ ಸುದೀರ್ಘ ಮಾಹಿತಿ ಪಡೆದಿದ್ದಾರೆ. ಇನ್ನೂ ಸಮರ್ಪಕ ಮಾಹಿತಿ ಪಡೆದ ನಂತರ ಅಧಿಕಾರಿಗಳು ಈ ಸಂಬಂಧ ಆರೋಪಿತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.  

opposition parties have blamed the government's failure for the suicide of Chandrashekhar, an officer of the Valmiki Development Corporation, and are protesting in this regard. Meanwhile, the government has handed over the case to the CID. A team led by DYSP Mohammad Rafi has started an investigation into the case and is conducting an inquiry at Chandrashekhar's house in Vinobanagar, Shivamogga.