ಬಿಸಿ ಟೀ ಪಾತ್ರೆಯನ್ನ ಬೀಳಿಸಿಕೊಂಡ 2 ವರುಷದ ಮಗು ದುರಂತ ಸಾವು

child who was seriously injured after falling a tea pot on his body, has succumbed to his injuries. The incident took place at Hirimane in Hosanagara taluk of Shivamogga district. 

ಬಿಸಿ ಟೀ ಪಾತ್ರೆಯನ್ನ ಬೀಳಿಸಿಕೊಂಡ 2 ವರುಷದ ಮಗು ದುರಂತ ಸಾವು
child death , Hirimane , Hosanagara taluk of Shivamogga district. 

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 1, 2024  

ಕುದಿಸಿಟ್ಟಿದ್ದ ಟೀ ಪಾತ್ರೆಯನ್ನ ಮೈಮೇಲೆ ಬೀಳಿಸಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಮಗುವೊಂದು ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹಿರೀಮನೆಯಲ್ಲಿ ಘಟನೆ ನಡೆದಿದೆ. 

ಇಲ್ಲಿನ ನಿವಾಸಿ ರಾಜೇಶ್‌, ಅಶ್ವಿನಿ ದಂಪತಿಯ ಮಗು 2 ವರುಷದ ಅಥರ್ವ ಮೃತಪಟ್ಟಿದೆ. ಕಳೆದ ಅಕ್ಟೋಬರ್‌ 24 ರಂದು ರಾಜೇಶ್‌ ರವರ ಸಮೀಪದ ಮನೆಯಲ್ಲಿ ಸಾವು ಸಂಭವಿಸಿತ್ತು. ಸಾವಿಗೆ ಸಂತಾಪ ಸೂಚಿಸಲು ಬಂದವರಿಗೆ ಟೀ ಕಾಫಿ ವ್ಯವಸ್ಥೆಯನ್ನ ಅಥರ್ವರವರ ತಾಯಿ ಅಶ್ವಿನಿ ನೋಡಿಕೊಳ್ಳುತ್ತಿದ್ದರು. ಈ ನಿಟ್ಟಿನಲ್ಲಿ ಅಶ್ವಿನಿಯವರು ಬಂದವರಿಗೆ ಟೀ ಕೊಡಲು ಪಾತ್ರೆಯಲ್ಲಿ ಟೀ ಕಾಸಿಟ್ಟಿದ್ದರು. ಇದನ್ನ ತಿಳಿಯದ ಪುಟಾಣಿ ಟೀ ಪಾತ್ರೆಯನ್ನ ಮೈಮೇಲೆ ಬೀಳಿಸಿಕೊಂಡಿದೆ. ಪರಿಣಾಮ ಮಗುವಿನ ಬಾಯಿಂದ ಹೊಟ್ಟೆಯವರಿಗೆ ಸುಟ್ಟ ಗಾಯವಾಗಿತ್ತು. 

ತಕ್ಷಣವೇ ಮಗುವನ್ನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿಂದ ಮಂಗಳೂರಿಗೆ ಕರೆದೊಯ್ದು ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇವತ್ತು ಮಗು ಮೃತಪಟ್ಟಿದೆ. 

pro kabaddi points table 2024

SUMMARY | A child, who was seriously injured after falling a tea pot on his body, has succumbed to his injuries. The incident took place at Hirimane in Hosanagara taluk of Shivamogga district. 




KEYWORDS | child death , Hirimane , Hosanagara taluk of Shivamogga district.