ಈ ಬಾಲಕಿಯ ಪೋಷಕರ ಬಗ್ಗೆ ಮಾಹಿತಿ ಲಭ್ಯವಾದರೆ ತಿಳಿಸಿ
Child Welfare Committee in Shivamogga has issued a notice to trace the parents of a girl

SHIVAMOGGA | MALENADUTODAY NEWS | Jul 10, 2024
ಬಾಲಕಿಯ ಪೋಷಕರ ಪತ್ತೆಗೆ ಮಕ್ಕಳ ಕಲ್ಯಾಣ ಸಮಿತಿಯಿಂದ ಪ್ರಕಟಣೆಯೊಂದನ್ನ ಹೊರಡಿಸಲಾಗಿದೆ. ಈ ಬಗೆಗಿನ ಮಾಹಿತಿ ಇಲ್ಲಿದೆ
ಶಿವಮೊಗ್ಗ ತೆರೆದ ತಂಗುದಾಣದ ಅಧಿಕಾರಿಗಳು ಬಾಲಕಿಯೊಬ್ಬಳನ್ನು ದಿನಾಂಕ: 19.04.2018 ರಂದು ರಕ್ಷಿಸಿ ಪಾಲನೆ, ಪೋಷಣೆ, ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ಹಾಜರುಪಡಿಸಿದ್ದರು.
ಬಾಲಕಿ ಸರ್ಕಾರಿ ಬಾಲಕಿಯರ ಬಾಲಮಂದಿರದ ನಿವಾಸಿಯಾಗಿದ್ದು ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆಯಸಾಮಾಜಿಕ ತನಿಖಾ ವರದಿ ಸ್ವೀಕೃತವಾಗಿದೆ. ಬಾಲಕಿಯ ತಾಯಿ ಮರಣ ಹೊಂದಿದ್ದು ಬಾಲಕಿಯ ಪೋಷಕರು ಯಾರೂ ಇಲ್ಲಿಯವರೆಗೂ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಬಾಲಕಿಯ ಮುಂದಿನ ಪುನರ್ವಸತಿ ಹಿತದೃಷ್ಠಿಯಿಂದ ಬಾಲಕಿಯ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಇವರ ಕಛೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-295511 ಗೆ ಸಂಪರ್ಕಿಸಲು ಕೋರಲಾಗಿದೆ. (ಇದು ಸರ್ಕಾರದ ಅಧಿಕೃತ ಇಲಾಖೆಯಿಂದಲೇ ವಾರ್ತಾ ಇಲಾಖೆ ಮೂಲಕ ಹೊರಡಿಸಲಾದ ಪ್ರಕಟಣೆಯಾಗಿದೆ. ಪ್ರಕಟಣೆಯ ವಿವರವನ್ನಷ್ಟೆ ಇಲ್ಲಿ ಪ್ರಕಟಿಸಲಾಗಿದೆ)
The Child Welfare Committee in Shivamogga has issued a notice to trace the parents of a girl who was rescued by the authorities of the open shelter in Shivamogga