ಸಂಬಂಧಿಯ ಆರೋಗ್ಯ ವಿಚಾರಿಸಲು ಬಂದ ತಂದೆಗೆ ಶಾಕ್ | ನೀರಿನ ಟ್ಯಾಂಕ್‌ಗೆ ಬಿದ್ದು ಸಾವನ್ನಪ್ಪಿತ್ತು ಮಗು
child died after falling into a water tank on the premises of mother and children's hospital in Shikaripura town of Shikaripura taluk of the district yesterday.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024
ಶಿವಮೊಗ್ಗ | ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಶಿಕಾರಿಪುರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ನಿನ್ನೆ ಮಗುವೊಂದು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ. ಇಲ್ಲಿನ ಆಸ್ಪತ್ರೆ ಆವರಣದಲ್ಲಿದ್ದ ಓಪನ್ ತೊಟ್ಟಿಯಲ್ಲಿ ಮಗು ಬಿದ್ದು ಸಾವನ್ನಪ್ಪಿದೆ.
ಸಮೀಪದ ಮತ್ತಿಕೋಟೆ ಗ್ರಾಮದ ಇಮ್ರಾನ್ ಅವರ ಪುತ್ರ ಮೂರು ವರುಷದ ಮೊಹಮದ್ ಅಯಾನ್ (3) ಮೃತಪಟ್ಟ ಪುಟಾಣಿ. ಮಗುವಿನ ತಂದೆ ಇಮ್ರಾನ್ ಆಸ್ಪತ್ರೆಯಲ್ಲಿದ್ದ ತಮ್ಮ ಸಂಬಂಧಿಕರ ಆರೋಗ್ಯ ವಿಚಾರಿಸಲು ಬಂದಿದ್ದರು. ಈ ವೇಳೆ ಮಗುವು ಅಲ್ಲಿಯೇ ಆಟವಾಡುತ್ತಿತ್ತು. ಆನಂತರ ಅಲ್ಲಿಂದ ತೊಟ್ಟಿ ಇದ್ದ ಜಾಗಕ್ಕೆ ತೆರಳಿದೆ. ಇತ್ತ ಮಗು ಕಾಣುತ್ತಿಲ್ಲ ಎಂದು ಹುಡುಕಾಡಿದ ಪೋ಼ಷಕರಿಗೆ ಮಗುವು ತೊಟ್ಟಿಯಲ್ಲಿ ಬಿದ್ದಿರುವುದು ಕಂಡಿದೆ. ಇನ್ನೂ ವಿಚಾರ ತಿಳಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
SUMMARY | A child died after falling into a water tank on the premises of mother and children's hospital in Shikaripura town of Shikaripura taluk of the district yesterday. The child died after falling into an open tank in the hospital premises here.
KEYWORDS | child died , falling into a water tank, mother and children's hospital in Shikaripura town , Shikaripura taluk