ಮಗುಗೆ ಕರ್ನಾಟಕ ಎಂದು ಹೆಸರಿಟ್ಟ ದಂಪತಿ | 60 ಅಡಿ ಆಳದ ಬಾವಿಗೆ ಬಿದ್ರು ಬದುಕಿ ಬಂದ 94 ರ ಅಜ್ಜಿ | ಬದುಕಿದ್ದಾಗಲೇ ಬಂತು ಡೆತ್‌ ಸರ್ಟಿಫಿಕೆಟ್‌

chikkamagaluru news 

ಮಗುಗೆ ಕರ್ನಾಟಕ ಎಂದು ಹೆಸರಿಟ್ಟ ದಂಪತಿ | 60 ಅಡಿ ಆಳದ ಬಾವಿಗೆ ಬಿದ್ರು ಬದುಕಿ ಬಂದ 94 ರ ಅಜ್ಜಿ  | ಬದುಕಿದ್ದಾಗಲೇ ಬಂತು ಡೆತ್‌ ಸರ್ಟಿಫಿಕೆಟ್‌
chikkamagaluru news 

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 3, 2024

60 ಅಡಿ ಆಳಕ್ಕೆ ಬಿದ್ದ 94 ವರ್ಷದ ಮಹಿಳೆ

ಬಾವಿಯಿಂದ ನೀರು ಸೇದುವಾಗ ಆಯತಪ್ಪಿ 60 ಅಡಿ ಆಳಕ್ಕೆ ಬಿದ್ದ 94 ವರ್ಷದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಮರಕಟ್ಲೆ ಗ್ರಾಮದಲಿ ನಿನ್ನೆ ದಿನ ಈ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಹಗ್ಗಕಟ್ಟಿ ಕೊಂಡು ಬಾವಿಗಿಳಿದು ಅಜ್ಜಿಯನ್ನ ರಕ್ಷಿಸಿದ್ದು, ಸದ್ಯ ವೃದ್ಧೆಗೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಗುವಿಗೆ ಕರ್ನಾಟಕ ಎಂದು ಹೆಸರಿಟ್ಟ ದಂಪತಿ

ಚಿಕ್ಕಮಗಳೂರು ನಗರದ ದಂಪತಿಯು ತಮ್ಮ 2 ನೇ ಮಗುವಿಗೆ ಕರ್ನಾಟಕ ಎಂದು ಹೆಸರನ್ನ ಇಟ್ಟು ನಾಮಕರಣ ಮಾಡಿದ್ದಾರೆ. ಕನ್ನಡ ಪ್ರೇಮವನ್ನ ಮೆರೆಯುವ ಸಲುವಾಗಿ ಈ ಹೆಸರನ್ನ ಇಟ್ಟಿದ್ದಾರೆ. ಅಲ್ಲದೆ  69ನೇ ಕನ್ನಡ ರಾಜ್ಯೋತ್ಸವದ ನೆನಪಿಗಾಗಿ ಅತಿಥಿಗಳಿಗೆ 69 ಪ್ರಥಮಗಳ ಚಾರ್ಟ್ ಗಿಫ್ಟ್‌ ನೀಡಿದ್ಧಾರೆ. ಈ ದಂಪತಿಯ ಕನ್ನಡ ಪ್ರೇಮಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಬದುಕಿರುವ ಅಜ್ಜಿಗೆ ಮರಣ ಪ್ರಮಾಣ ಪತ್ರ ಮಾಡಿಸಿದರು

ಕಲಿಯುಗದಲ್ಲಿ ಏನು ಬೇಕಾದರೂ ನಡೆಯುತ್ತದೆ ಎನ್ನುವುದಕ್ಕೆ ಚಿಕ್ಕಮಗಳೂರಿನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಇಲ್ಲಿನ ಕಡೂರು ತಾಲ್ಲೂಕು ಗ್ರಾಮವೊಂದರಲ್ಲಿ ಅಜ್ಜಿಯೊಬ್ಬಳು ಬದುಕಿದ್ದಾಗಲೇ ಅವರ ಮೊಮ್ಮಕ್ಕಳು ಮರಣ ಪ್ರಮಾಣ ಪತ್ರ ಮಾಡಿಸಿ ಆಸ್ತಿ ಲಪಟಾಯಿಸಿದ್ದಾರಂತೆ.ಇಲ್ಲಿ ನಿವಾಸಿ ಗಂಗಮ್ಮ ಎಂಬವರಿಗೆ ಅವರ ಗಂಡನ ಮನೆಯ ಕಡೆಯಿಂದ ಆಸ್ತಿ ಬರಬೇಕಿತ್ತು. ಆದರೆ ಆಸ್ತಿ ಕೊಡುವ ಬದಲು ಗಂಗಮ್ಮರ ಪತಿ ಅಣ್ಣಂದಿರ ಕಡೆಯವರು ಗಂಗಮ್ಮನ ಹೆಸರಲ್ಲಿ ಮರಣಪ್ರಮಾಣ ಪತ್ರ ಮಾಡಿಸಿ ಆಸ್ತಿಯನ್ನೆ ಕಬಳಿಸಿದ್ದಾರೆ. ಇದರಿಂದಾಗಿ ಗಂಗಮ್ಮ ಇತ್ತ ಆಸ್ತಿಯು ಸಿಗದೇ , ಸರ್ಕಾರಿ ಸೌಲಭ್ಯವನ್ನು ಸಹ ಪಡೆಯಲಾಗದೆ ಸಹಾಯದ ಯಾಚನೆಯಲ್ಲಿದ್ದಾರೆ 

SUMMARY | chikkamagaluru news 



KEY WORDS  |  chikkamagaluru news