ವೃದ್ಧ ದಂಪತಿಯ ರೇಪ್‌ & ಕೊಲೆ, ಮೊಮ್ಮಗನೇ ಅರೆಸ್ಟ್‌ | ಕಾರಣ ಅಸಹ್ಯ!

chikkamagaluru muder case , mallandur police station

ವೃದ್ಧ ದಂಪತಿಯ ರೇಪ್‌ & ಕೊಲೆ, ಮೊಮ್ಮಗನೇ ಅರೆಸ್ಟ್‌ | ಕಾರಣ ಅಸಹ್ಯ!
chikkamagaluru muder case , mallandur police station

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024 ‌ 

ಚಿಕ್ಕಮಗಳೂರು | ಜಿಲ್ಲೆಯಲ್ಲಿ ನಡೆದ ವೃದ್ಧ ದಂಪತಿಯ ಧಾರುಣ ಹತ್ಯೆ ಪ್ರಕರಣವನ್ನ ತನಿಖೆ ನಡೆಸಿದ ಪೊಲೀಸರೇ ಬೆಸ್ತು ಬಿದ್ದಿದ್ದಾರೆ. ಅದರಲ್ಲಿಯು ಕೊಲೆಯ ಕಾರಣ ಧೃತಿಗೆಡಿಸುತ್ತಿದೆ. 

ಚಿಕ್ಕಮಗಳೂರು ತಾಲ್ಲೂಕು ಕೊಳಗಾಮೆ ಎಂಬ ಗ್ರಾಮದಲ್ಲಿ ಕಳೆದ ನವೆಂಬರ್‌ 21 ರಂದು ವೃದ್ಧ ದಂಪತಿಯ ಕೊಲೆ ನಡೆದಿತ್ತು. ಈ ಪ್ರಕರಣವನ್ನ ತನಿಖೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ವೃದ್ಧ ದಂಪತಿಯ ಮೊಮ್ಮಗನನ್ನ ಅರೆಸ್ಟ್‌ ಮಾಡಿದ್ದರು. ಆತ ಯಾಕಾಗಿ ಅಜ್ಜ ಅಜ್ಜಿಯನ್ನ ಕೊಲೆ ಮಾಡಿದ್ದ ಎಂಬ ವಿಚಾರ ಇದೀಗ ಅಸಹ್ಯ ಮೂಡಿಸುತ್ತಿದೆ. 

ಬೆಂಗಳೂರಿನಲ್ಲಿ  ಕೆಲಸ ಮಾಡುತ್ತಿದ್ದ ನಿಶಾಂತ್‌ ಎಂಬಾತನೆ ಕೊಲೆಗಾರ, ಈತ ಪೊಲೀಸರ ಬಳಿ ನಡೆದಿದ್ದ ಬಿಚ್ಚಿಟ್ಟಿದ್ದು ಕೊಲೆ ಮಾಡಲು ಕಾರಣವನ್ನ ತಿಳಿಸಿದ್ದಾರೆ. ಪೊಲೀಸ್‌ ವಿಚಾರಣೆ ವೇಳೆ ಆತ, ತನಗೆ ಮಹಿಳೆಯರ ಜೊತೆ ಸಂಗ ಮಾಡುವ ಅಭ್ಯಾಸವಿತ್ತು. ಈ ನಡುವೆ ಮೈ ತುಂಬಾ ಕಜ್ಜಿಯಾಗಿದೆ. ಅದು ಹೋಗಲು ಕೆಲವರು ಕಾಂಡೋಮ್‌ ಇಲ್ಲದೆ ಮಹಿಳೆಯರ ಜೊತೆ ಸಂಗ ಮಾಡು ಎಂದು ಸಲಹೆ ಕೊಟ್ಟಿದ್ದರಂತೆ. ಆದರೆ ಇದಕ್ಕೆ ಬೆಂಗಳೂರಿನಲ್ಲಿ ಯಾರು ಒಪ್ಪಿರಲಿಲ್ಲ. ಹಾಗಾಗಿ ಊರಿಗೆ ಬಂದಿದ್ದಾಗಿ ತಿಳಿಸಿದ್ದಾನೆ. ಆ ಬಳಿಕ ಊರಿನಲ್ಲಿ ಅಜ್ಜಿಯನ್ನೇ ತನ್ನ ದುಷ್ಕೃತ್ಯಕ್ಕೆ  ಬಳಸಿಕೊಂಡ ಈತ, ಅಜ್ಜನನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಅಜ್ಜಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. 

 

SUMMARY | chikkamagaluru muder case , mallandur police station

KEY WORDS  | chikkamagaluru muder case , mallandur police station