ಶಿಕಾರಿಪುರ | ದುಡ್ಡುಕೊಡ್ತೀನಿ ಬಾ ಎನ್ನುತ್ತಾ ಮಹಿಳೆಗೆ ಅಸಭ್ಯ ಕಿರುಕುಳ | ಯುವಕನ ವಿರುದ್ಧ ಕೇಸ್

FIR registered in Shikaripura , charges of harassment and death threats to a woman

ಶಿಕಾರಿಪುರ | ದುಡ್ಡುಕೊಡ್ತೀನಿ ಬಾ ಎನ್ನುತ್ತಾ ಮಹಿಳೆಗೆ ಅಸಭ್ಯ ಕಿರುಕುಳ  | ಯುವಕನ ವಿರುದ್ಧ ಕೇಸ್
FIR registered in Shikaripura , charges of harassment and death threats to a woman

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 23, 2025 ‌‌ 

ಮಹಿಳೆಯೊಬ್ಬರಿಗೆ ಫೋನ್‌ ಮಾಡಿ ಮಂಚಕ್ಕೆ ಕರೆದಿದ್ದಷ್ಟೆ ಅಲ್ಲದೆ, ಆಕೆಯ ಮನೆಗೆ ಹೋಗಿ ಬಾಗಿಲು ತಟ್ಟಿ ಹೆದರಿಸಿ ಬೆದರಿಸಿ ವ್ಯಕ್ತಿಯ ವಿರುದ್ಧ ಶಿಕಾರಿಪುರ ತಾಲ್ಲೂಕು ಪೊಲೀಸ್‌ ಠಾಣೆಯೊಂದರಲ್ಲಿ FIR ದಾಖಲಾಗಿದೆ. ಮೇಲಾಗಿ ಈ ವ್ಯಕ್ತಿಯ ವಿರುದ್ಧ, ಕೃತ್ಯವನ್ನು ಪ್ರಶ್ನೆ ಮಾಡಿದ್ದಕ್ಕೆ ಕಂದಲಿಯಿಂದ ಹಲ್ಲೆಗೆ ಮುಂದಾದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪವೂ ದಾಖಲಾಗಿದೆ.  BHARATIYA NYAYA SANHITA (BNS), 2023 (U/s-329(4),352,351(3)) ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ಸಂತ್ರಸ್ತೆ ನೀಡಿದ ದೂರಿನಲ್ಲಿ ಆರೋಪಿತ ವ್ಯಕ್ತಿಯು, ಆಕೆಗೆ ಕರೆ ಮಾಡಿ ದುಡ್ಡುಕೊಡ್ತೀನಿ ತನ್ನೊಂದಿಗೆ ಬಂದು ಮಲಗು ಎಂದು ಕರೆದಿದ್ದಾನೆ ಎನ್ನಲಾಗಿದೆ. ಇದರಿಂದ ಭಯಗೊಂಡ ಸಂತ್ರಸ್ತೆ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡರೂ ಸಹ ಆಕೆ ಮನೆಯ ಬಾಗಿಲು ತಟ್ಟಿ ಆರೋಪಿ ಹೆದರಿಸಿದ್ದಾನೆ. ಬಳಿಕ ಮರುದಿನ ಇದನ್ನ ಸಂತ್ರಸ್ತೆಯ ಕುಟುಂಬಸ್ಥರು ಪ್ರಶ್ನಿಸಿಲು ಆರೋಪಿತನ ಮನೆಗೆ ಹೋದಾಗ ಮೊದಲು ಕ್ಷಮೆ ಕೇಳಿದ ಆರೋಪಿ ಆ ಬಳಿಕ ಕಂದಲಿಯಿಂದ ಹಲ್ಲೆಗೆ ಮುಂದಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರಲಾಗಿದೆ. 

SUMMARY |  FIR has been registered in Shikaripura on charges of harassment and death threats to a woman

KEY WORDS | FIR registered in Shikaripura , charges of harassment and death threats to a woman