ಲಕ್ಷ ಲಕ್ಷ ಸಂತ್ರಸ್ತರಿಗೆ ಅನುಕೂಲವಾಗುವ ನಿಜಕ್ಕೂ ಒಳ್ಳೆಯ ಯೋಜನೆ ಘೋಷಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
Nitin Gadkari announces cashless treatment, cashless treatment scheme for road accident victims
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 9, 2025
ಇನ್ಮುಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ದೇಶಾದ್ಯಂತ ನಗದು ರಹಿತ ಚಿಕಿತ್ಸೆ ಯೋಜನೆ ಸಿಗಲಿದೆ. ಈ ಸಂಬಂಧ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.
ಈ ಯೋಜನೆ ಅನ್ವಯ ಅಪಘಾತದಲ್ಲಿ ಗಾಯಗೊಂಡವರಿಗೆ 7 ದಿನಗಳ ಕಾಲ ಗರಿಷ್ಠ 1.5 ಲಕ್ಷ ರೂ.ವರೆಗೆ ನಗದು ರಹಿತವಾಗಿ ಚಿಕಿತ್ಸೆ ದೊರೆಯಲಿದೆ. ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಇನ್ನೂ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಕ್ಕೂ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಗಡ್ಕರಿ ಘೋಷಿಸಿದ್ದಾರೆ. ಹೆದ್ದಾರಿ ಮಾತ್ರವಲ್ಲದೆ, ಯಾವುದೇ ರಸ್ತೆಯಲ್ಲಿ ವಾಹನ ಅಪಘಾತವಾದರೂ ಈ ಯೋಜನೆಯಡಿ ಪ್ರಯೋಜನ ದೊರೆಯಲಿದೆ.
ಈಗಾಗಲೇ ಛತ್ತೀಸ್‌ಗಢದಲ್ಲಿ ಪ್ರಾಯೋಗಿಕವಾಗಿ ಆನಂತರ 6 ರಾಜ್ಯಗಳಿಗೆ ವಿಸ್ತರಿಸಲಾಗಿರುವ ಈ ಯೋಜನೆ ಯನ್ನು 2025ರ ಮಾರ್ಚ್ ವೇಳೆಗೆ ದೇಶಾದ್ಯಂತ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಘಡ್ಕರಿ ಮಾಹಿತಿ ನೀಡಿದ್ದಾರೆ
SUMMARY | Nitin Gadkari announces nationwide cashless treatment scheme for road accident victims
KEY WORDS | Nitin Gadkari announces cashless treatment, cashless treatment scheme for road accident victims