ಮುಲ್ಕಿಯಲ್ಲಿ ಶಿವಮೊಗ್ಗ ಮೂಲದ ಗೃಹಿಣಿ & ಮಗು ಕೊಲೆ | ಪತಿ ಆತ್ಮಹತ್ಯೆ

case of suspected double murder and an alleged suicide in a family was reported in Mulki police station limits on Saturday. The deceased are Kartik Bhat, 32, his wife Priyanka, 27, and their son Hriday, 4

ಮುಲ್ಕಿಯಲ್ಲಿ ಶಿವಮೊಗ್ಗ ಮೂಲದ ಗೃಹಿಣಿ  & ಮಗು ಕೊಲೆ | ಪತಿ ಆತ್ಮಹತ್ಯೆ
case of suspected double murder , alleged suicide in a family, Mulki police station

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024 

ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿಯಲ್ಲಿ ಶಿವಮೊಗ್ಗ ಮೂಲದ ಗೃಹಿಣಿ ಹಾಗೂ ಆಕೆಯ ಮಗನನ್ನ ಪತಿರಾಯನೇ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ಘಟನೆಯ ಬಳಿಕ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಪಕ್ಷಿಕೆರೆಯ ವ್ಯಕ್ತಿರೊಬ್ಬರು ಈ ಕೃತ್ಯವೆಸಗಿದ್ದು, ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32). ಪತ್ನಿ ಶಿವಮೊಗ್ಗದ ಪ್ರಿಯಾಂಕಾ (28) ಮತ್ತು ಪುತ್ರ ಹೃದಯ (4) ಮೃತರು. ಈ ಬಗ್ಗೆ ಡೆತ್‌ನೋಟ್‌ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೆ ಮನೆಯಲ್ಲಿ ವಾಸಿಸುತ್ತಿದ್ದ ಮೂವರು ಬೇರೆ ಬೇರೆಯಾಗಿ ಉಳಿದುಕೊಂಡಿದ್ದರು. ಪರಸ್ಪರ ಮಾತನಾಡುತ್ತಿರಲಿಲ್ಲ. ಈ ನಡುವೆ ಇಂತಹದ್ದೊಂದು ಘಟನೆ ನಡೆದಿದೆ. 

ಮೂಲಗಳ ಪ್ರಕಾರ, ರೈಲ್ವೆ ಟ್ರ್ಯಾಕ್‌ವೊಂದರ ಬಳಿ ಅಪರಿಚಿತ ಬಾಡಿ ಪತ್ತೆಯಾಗಿತ್ತು. ದೇಹ ಛಿದ್ರವಾಗಿದ್ದ ಕಾರಣ, ಆತನ ಗುರುತು ಪತ್ತೆಯಾಗಿರಲಿಲ್ಲ. ಆದರೆ ಈ ಸ್ಟಳದಲ್ಲಿ ಒಂದು ಬೈಕ್‌ ಕೀ ಸಿಕ್ಕಿತ್ತು. ಅದನ್ನ ಬಳಸಿ ವಾರಸ್ಸುದಾರರಿಲ್ಲದೇ ಪತ್ತೆಯಾದ ಬೈಕ್‌ವೊಂದನ್ನ  ಓಪನ್‌ ಮಾಡಲಾಗಿದೆ. ಈ ವೇಳೆ ವಾಹನದಲ್ಲಿ ಪತ್ತೆಯಾದ ಆರ್‌ಸಿ ಬುಕ್‌ ಆಧರಿಸಿ ಪೊಲೀಸರು ಪೋಷಕರನ್ನ ಸಂಪರ್ಕಿಸಿದೆ. ಆ ವೇಳೆ ಪೋಷಕರು ಮೃತನ ಪತ್ನಿಗೆ ಕರೆ ಮಾಡಿದ್ದಾರೆ. ಅವರು ಸಹ ಕರೆ ಸ್ವೀಕರಿಸದೇ ಹೋದ ಕಾರಣಕ್ಕೆ ಮನೆ ಭೀಗವನ್ನ ಪಡೆದು ಪೊಲೀಸರ ಮೂಲಕ ಒಳಕ್ಕೆ ಪ್ರವೇಶ ಮಾಡಿದ್ದಾರೆ. ಈ ವೇಳೆ ಅಲ್ಲಿ ಪ್ರಿಯಾಂಕಾ ಹಾಗೂ ಹೃದಯರವರ ಶವ ಪತ್ತೆಯಾಗಿದೆ. ಅಲ್ಲದೆ ಮೃತ ಕಾರ್ತಿಕ್‌ರ ಡೆತ್‌ನೋಟ್‌ ಪತ್ತೆಯಾಗಿದೆ. 

  

SUMMARY |  case of suspected double murder and an alleged suicide in a family was reported in Mulki police station limits on Saturday. The deceased are Kartik Bhat, 32, his wife Priyanka, 27, and their son Hriday, 4

KEYWORDS | case of suspected double murder , alleged suicide in a family, Mulki police station  Kartik Bhat, 32, his wife Priyanka, 27, and their son Hriday, 4