ಸಿಗ್ನಲ್‌ ಕ್ರಾಸ್‌ ಮಾಡುವಾಗ ಹೀರೋ ಆಗೋದು ಬೇಡ | ಯಾಮಾರಿದ್ರೆ ಹೀಗಾಗುತ್ತೆ ಜಾಗೃತೆ

car dashboard camera captured a motorcycle crashing scene, motorcycle, signal  jumping Mangalore

ಸಿಗ್ನಲ್‌ ಕ್ರಾಸ್‌ ಮಾಡುವಾಗ ಹೀರೋ ಆಗೋದು ಬೇಡ | ಯಾಮಾರಿದ್ರೆ ಹೀಗಾಗುತ್ತೆ ಜಾಗೃತೆ
car dashboard camera captured a motorcycle crashing scene, motorcycle, signal  jumping Mangalore

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 5, 2025 ‌‌ 

ಸಿಗ್ನಲ್‌ ಜಂಪ್‌ ಮಾಡುವುದು ಇದೀಗ ಕಾಮನ್‌ ಅಪರಾಧ ಎಂಬಂತಾಗಿದೆ, ಅದರಲ್ಲಿಯು ಹಳದಿ ಲೈಟ್‌ ಇದ್ದ ಸಂದರ್ಭದಲ್ಲಿ ರೆಡ್‌ ಲೈಟ್‌ ಬೀಳುವುದರಲ್ಲಿ ಸರ್ಕಲ್‌ ಪಾಸ್‌ ಆಗ್ತಿನಿ ಎಂದು ನುಗ್ಗುವ ವಾಹನಗಳು, ಇನ್ನೊಂದೆಡೆ ಗ್ರೀನ್‌ ಲೈಟ್‌ ಬೀಳುವುದಕ್ಕೂ ಮೊದಲೇ ಹೊರಡುವ ವಾಹನಗಳಿಗೆ ಡಿಕ್ಕಿಯಾಗುವ ಸಂಭವ ಜಾಸ್ತಿಯೇ ಇರುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತ ವಿಡಿಯೋವೊಂದು ಇವತ್ತು ವೈರಲ್‌ ಆಗುತ್ತಿದೆ. ಸಿಗ್ನಲ್‌ ಜಂಪ್‌ ಮಾಡಿಕೊಂಡು ಬಂದ ಯುವಕನೊಬ್ಬನಿಗೆ ಇನ್ನೊಂದು ವಾಹನ ಡಿಕ್ಕಿಯಾಗುವ ದೃಶ್ಯ ಇವತ್ತು ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ವಿಡಿಯೋದ ಮೂಲ ಹುಡುಕಿದಾದ ಇದು ಮಂಗಳೂರು ಲಾಲ್‌ಬಾಗ್‌ನಲ್ಲಿ ನಡೆದ ಘಟನೆ ಎಂಬುದು ಗೊತ್ತಾಗಿದೆ. 

ಇಲ್ಲಿನ ಸರ್ಕಲ್‌ ನಲ್ಲಿ ಕೆಎಸ್‌ಆರ್‌ಟಿಸಿ ಕಡೆಯಿಂದ ಬರುತ್ತಿರುವ ವಾಹನಗಳು ಸಿಗ್ನಲ್‌ ಬಿಡುತ್ತಲೇ ಮುಂದಕ್ಕೆ ಸಾಗಿವೆ ಇದೇ ವೇಳೆ ಯುವಕ ಸಿಗ್ನಲ್‌ ಜಂಪ್‌ ಮಾಡಿ ರಸ್ತೆ ಕ್ರಾಸ್‌ ಮಾಡಲು ಮುಂದಾಗಿದ್ದಾನೆ. ಹಾಗಾಗಿ ಇನ್ನೊಂದು ಬೈಕ್‌ಗೆ ಅಚಾತುರ್ಯದಿಂದ ಬೈಕ್‌ ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡು ಬೈಕ್‌ನ ಸವಾರರು ನೆಲಕ್ಕೆ ಬಿದ್ದಿದ್ದು, ಇಬ್ಬರಿಗೂ ಪೆಟ್ಟಾಗಿದೆ. 

ಅಂದಹಾಗೆ ಈ ಘಟನೆ ಸಿಗ್ನಲ್‌ನಲ್ಲಿ ನಿಂತಿದ್ದ ಕಾರೊಂದರ ಡ್ಯಾಶ್‌ ಬೋರ್ಡ್‌ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದ್ದು ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ದಯವಿಟ್ಟು ಸಿಗ್ನಲ್‌ ಜಂಪ್‌ ಮಾಡಬೇಡಿ ಎಂದು ಜನರು ಮನವಿ ಮಾಡುತ್ತಿದ್ದಾರೆ.

SUMMARY | car dashboard camera captured a motorcycle crashing into a motorcycle that was jumping a signal in Mangalore.

KEY WORDS |  car dashboard camera captured a motorcycle crashing scene, motorcycle, signal  jumping Mangalore