ಹಳೆಯ ವ್ಯಾಗನಾರ್ ಕಾರಿಗೆ ಅಂತ್ಯಸಂಸ್ಕಾರ | 1500 ಜನರಿಗೆ ತಿಥಿಯೂಟ
video of a car being cremated in Gujarat gone viral on social media.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ಮೃತರಿಗೆ ಅಂತ್ಯಸಂಸ್ಕಾರ ಮಾಡುವುದು, ಪ್ರೀತಿಯ ಪ್ರಾಣಿಗಳಿಗೆ ಮನುಷ್ಯರ ರೀತಿಯಲ್ಲಿ ಅಂತ್ಯಕ್ರಿಯೆ ಮಾಡುವುದು ನೋಡೇ ಇರುತ್ತೇವೆ. ಇಲ್ಲೊಬ್ಬರು ತಮ್ಮ ಕಾರಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಷ್ಟೆ ಅಲ್ಲದೆ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ ತಿಥಿಯೂಟ ಹಾಕಿಸಿದ ದೃಶ್ಯ ಇದೀಗ ವೈರಲ್ ಆಗುತ್ತಿದೆ.
ಗುಜರಾತ್‌ನ ರೈತ ಸಂಜಯ್ ಪೊಲ್ಲಾರ ರವರು ತಮ್ಮ ಹಳೆಯ ವ್ಯಾಗನರ್ ಕಾರಿ ಅಂತ್ಯಕ್ರಿಯೆ ನಡೆಸಿದ್ದು, ಅದರ ದೃಶ್ಯ ವೈರಲ್ ಆಗಿದೆ. 12 ವರ್ಷದ ಹಳೆಯ ಕಾರಿಗೆ ಅಂತ್ಯಕ್ರಿಯೆ ನಡೆಸಿ 4 ಲಕ್ಷ ರೂಪಾಯಿ ವೆಚ್ಚದಲ್ಲಿ, 1500 ಜನರಿಗೆ ಊಟ ಹಾಕಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಲಾಠಿ ತಾಲೂಕಿನ ಪಾದರ್‌ಶಿಂಗ ಗ್ರಾಮದಲ್ಲಿ ಘಟನೆ ನಡೆದಿದೆ.
???? A family in Gujarat bid a heartfelt farewell to their beloved 12-year-old car with a full-fledged burial ceremony along with traditional rituals. Such a weird fantasy. pic.twitter.com/z9aW3rKond — Indian Tech & Infra (@IndianTechGuide) November 10, 2024
SUMMARY | A video of a car being cremated in Gujarat gone viral on social media.
KEYWORDS | video of a car being cremated in Gujarat gone viral , viral on social media