ವಿನೋಬನಗರ ರಸ್ತೆಯಲ್ಲಿ ನಿನ್ನೆ ನಡೆದಿದ್ದೇನು? ಈ ಘಟನೆ ತುಂಬಾ ಅನುಮಾನಕ್ಕೆ ಕಾರಣವೇನು?
car collided with a bike, Kariyanna Building ,Vinobanagar in Shivamogga
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ಶಿವಮೊಗ್ಗ ನಗರದ ಸವಿ ಬೇಕರಿ ಸಮೀಪ ನಡೆದ ಅಪಘಾತ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಘಟನೆಯಲ್ಲಿ ತಾಯಿ ಹಾಗೂ ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯಲ್ಲಿ ಹಲವು ಸಂಶಯಗಳು ಮೂಡುತ್ತಿವೆ.
ಏನಿದು ಘಟನೆ
ನಿನ್ನೆ ದಿನ ಕರಿಯಣ್ಣನ ಬಿಲ್ಡಿಂಗ್ ಕಡೆಯಿಂದ ಮುಂದಕ್ಕೆ ಸಾಗಿ ಯೂಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಕರಿಯಣ್ಣನ ಬಿಲ್ಡಿಂಗ್ ಕಡೆಯಿಂದಲೇ ಬಂದ ಸ್ಕೋಡಾ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಮಹಿಳೆ ಹಾಗೂ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಹೇಳುವಂತೆ ಅಪಘಾತವೆಸಗಿದ ಕಾರು ಅಲ್ಲಿಂದ ಮುಂದಕ್ಕೆ ಸಾಗಿತ್ತು ಎನ್ನಲಾಗಿದೆ. ಸ್ಥಳೀಯರು ವಾಹನವನ್ನ ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.
ಈ ನಡುವೆ ಅಪಘಾತವೆಸಗಿದ ಕಾರಿನಲ್ಲಿದ್ದವರು ಯಾರು ಎಂಬ ವಿಚಾರವಾಗಿ ಹಲವರ ಹೆಸರು ಕೇಳಿಬರುತ್ತಿದೆ. ಈ ವಿಚಾರದಲ್ಲಿ ಹಲವು ಸಂಶಯಗಳನ್ನ ಪ್ರತ್ಯಕ್ಷದರ್ಶಿಗಳು ವ್ಯಕ್ತಪಡಿಸುತ್ತಿದ್ದಾರೆ. ಆದರೆ ದಾಖಲಾಗಿರುವ ದೂರಿನ ಪ್ರಕಾರ ಗಮನಿಸುವುದಾದರೆ, ಕಾರಿನ ಚಾಲಕನ ವಿರುದ್ಧ ಕಂಪ್ಲೆಂಟ್ ದಾಖಲಾಗಿದೆ.
ಗಾಯಗೊಂಡವರು ಉಮಾ ಹಾಗೂ ಅವರ ಮಗ ಶ್ರೇಯಸ್. ಇಬ್ಬರನ್ನ ಸಹ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವಿಚಾರ ತಿಳಿದು ಉಮಾರವರ ಸಹೋದರ ದೂರು ನೀಡಿದ್ದು ಅದರಂತೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಪಘಾತದ ಬೆನ್ನಲ್ಲೆ ಕಾರಿನ ಚಾಲಕ ಇನ್ನೊಂದು ಕಾರಿನಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಪ್ರಕರಣ ಪೊಲೀಸ್ ವರ್ಷನ್ ಹಾಗೂ ಸ್ಥಳೀಯ ವರ್ಷನ್ ಹೊಂದಿದ್ದು ಹಲವು ವಿಡಿಯೋಗಳು ಮೊಬೈಲ್‌ಗಳಲ್ಲಿ ಸರ್ಕಿಯುಲೇಟ್ ಆಗುತ್ತಿದೆ.
SUMMARY | car collided with a bike near Kariyanna Building in Vinobanagar in Shivamogga.
KEYWORDS | car collided with a bike, Kariyanna Building ,Vinobanagar in Shivamogga.