ಬಾಳಬರೆ ಚಂಡಿಕಾ ದೇವಾಸ್ಥಾನದ ಬಳಿಯಲ್ಲಿ ಕ್ಯಾಂಟರ್ ಪಲ್ಟಿ, ಬೊಲೆರೊ ಜಖಂ
canter overturned near Chandika Devasthanam near Balebare at Hulikal Ghat in Hosanagara taluk of Shivamogga district.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024
ಶಿವಮೊಗ್ಗ | ಹೊಸನಗರ ತಾಲ್ಲೂಕು ಬಾಳೆಬರೆಯಲ್ಲಿರುವ ಚಂಡಿಕಾಂಬಾ ದೇವಾಲಯದ ಬಳಿ ಕ್ಯಾಂಟರ್‌ವೊಂದು ಪಲ್ಟಿಯಾಗಿರುವ ಬಗ್ಗೆ ವರದಿಯಾಗಿದೆ.
ಕ್ಯಾಂಟರ್ ಪಲ್ಟಿಯಾದ ಪರಿಣಾಮ ದೇವಾಲಯದ ಧರ್ಮದರ್ಶಿಗಳಿಗೆ ಸೇರಿದ ವಾಹನ ಜಖಂಗೊಂಡಿದೆ. ಹಾಗೂ ದೇವಾಲಯದ ಕಾಪೌಂಡ್ ಕುಸಿದಿದೆ. ಇನ್ನೂ ಕ್ಯಾಂಟರ್ ಒಂದು ಬದಿಗೆ ಪಲ್ಟಿಯಾಗಿದ್ದು, ಅದರಲ್ಲಿರುವ ಸಾಮಗ್ರಿಯು ರಸ್ತೆಗೆಬಿದ್ದಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.
ನಿನ್ನೆ ರಾತ್ರಿ 8 ಗಂಟೆ ಹೊತ್ತಿಗೆ ನಡೆದ ಘಟನೆ ಇದು. ಶಿವಮೊಗ್ಗದಿಂದ ಬರುತ್ತಿದ್ದ ಕ್ಯಾಂಟರ್ ದೇವಾಲಯದ ತಿರುವಿನ ಬಳಿಯಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಇದಕ್ಕೂ ಮೊದಲು ದೇವಾಲಯದ ಕಾಂಪೌಡ್ ಹಾಗೂ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗಿದೆ.
ಕ್ಯಾಂಟರ್ ಚಾಲಕನಿಗೆ ಪೆಟ್ಟಾಗಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
SUMMARY | canter overturned near Chandika Devasthanam near Balebare at Hulikal Ghat in Hosanagara taluk of Shivamogga district.
KEYWORDS | canter overturned , Chandikamba Devasthana, near Balebare at Hulikal Ghat, Hosanagara taluk of Shivamogga district.