ಹೋರಿಹಬ್ಬದ ನಾಯ್ಕರ ಗೂಳಿ 200 ರ ಹುಟ್ಟುಹಬ್ಬ | 20 KG ಕೇಕ್ ಕಟ್ ಮಾಡಿ ಹಬ್ಬ ಮಾಡಿದ ಅಭಿಮಾನಿಗಳು
cake weighing 20 kg was brought for the birthday of a bull in Shikaripura taluk of Shivamogga district
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಹೋರಿಯೊಂದರ ಹುಟ್ಟುಹುಬ್ಬದ ಸಂಬಂಧ 20 ಕೆಜಿ ತೂಕದ ಕೆಕ್ ಕಟ್ ಮಾಡಲಾಗಿದೆ. ಈ ಮೂಲಕ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬವನ್ನ ಆಚರಿಸಲಾಗಿದೆ.
ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡದಲ್ಲಿನ ಯುವಕರು ಈ ರೀತಿಯಾಗಿ ಎತ್ತಿನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಹೋರಿಹಬ್ಬಕ್ಕೆ ಮೀಸಲಿರುವ ಹೋರಿ ಇದಾಗಿದ್ದು ಅದರ ಜನ್ಮದಿನಕ್ಕೆ 20 ಕೆಜಿ ಕೇಕ್ ತಂದು ಹುಟ್ಟಿದ ಹಬ್ಬವನ್ನ ಆಚರಿಸಿದ್ದಾರೆ.
ಶೀರಿಹಳ್ಳಿ ತಾಂಡದ ಶಂಕರನಾಯ್ಕ ಎಂಬುವರಿಗೆ ಸೇರಿದ ಹೋರಿ ಇದಾಗಿದೆ. ಇದರ ಹೆಸರು ನಾಯ್ಕರ ಗೂಳಿ 200. ವಿವಿಧ ಹೋರಿಹಬ್ಬದಲ್ಲಿ ಪ್ರಶಸ್ತಿ ಪಡೆದಿರುವ ಈ ಹೋರಿಗೆ ಅಭಿಮಾನಿಗಳು ಸಹ ಇದ್ದಾರೆ.
SUMMARY | A cake weighing 20 kg was brought for the birthday of a bull in Shikaripura taluk of Shivamogga district
KEYWORDS |A cake weighing 20 kg, birthday of a bull, horihabba, Shikaripura taluk , Shivamogga district