ಬೆಟ್ಟಿಂಗ್‌ ಪಾರಿವಾಳದಿಂದ ಬಸ್‌ ಅಪಘಾತ | ನಡೆದಿದ್ದೇನು?

near Sivaganga petrol pump on Ballari Road

ಬೆಟ್ಟಿಂಗ್‌ ಪಾರಿವಾಳದಿಂದ  ಬಸ್‌ ಅಪಘಾತ | ನಡೆದಿದ್ದೇನು?
near Sivaganga petrol pump on Ballari Road

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024 

ಬಸ್‌ ಚಲಾಯಿಸುತ್ತಿದ್ದ ವೇಳೆ ಪಾರಿವಾಳವನ್ನು ಹಿಡಿಯಲು ಹೋಗಿ ಚಾಲಕ ಸ್ಟೇರಿಂಗ್‌ ಕೈ ಬಿಟ್ಟ ಪರಿಣಾಮ ಬಸ್‌ವೊಂದು ಅಪಘಾತಕ್ಕೀಡಾಗಿದೆ. ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಸ್‌ ಆಕ್ಸಿಡೆಂಟ್‌ ಆಗಿದ್ದು, 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಳ್ಳಾರಿ ರಸ್ತೆ ಶಿವಗಂಗಾ ಪೆಟ್ರೊಲ್ ಬಂಕ್ ಬಳಿ ಘಟನೆ ನಡೆದಿದೆ. 

ಬಳ್ಳಾರಿಯಿಂದ ಚಿತ್ರದುರ್ಗದ ಕಡೆಗೆ ಬಸ್ ಸಂಚರಿಸುತ್ತಿತ್ತು. ಬಸ್‌ನಲ್ಲಿ ಬೆಟ್ಟಿಂಗ್‌ ಪಾರಿವಾಳದ ಬಾಕ್ಸ್ ಇಡಲಾಗಿತ್ತು. ಅದರಲ್ಲಿದ್ದ ಪಾರಿವಾಳವೊಂದು ಬಾಕ್ಸ್‌ನಿಂದ ಹಾರಲು ಆರಂಭಿಸಿದೆ. ಈ ವೇಳೆ ಅದನ್ನ ಚಾಲಕ ಹಿಡಿಯಲು ಹೋಗಿ ಬಸ್‌ ಅಪಘಾತಕ್ಕೀಡಾಗಿದೆ. ಬೆಟ್ಟಿಂಗ್‌ ಪಾರಿವಾಳಗಳನ್ನು ಬಾಕ್ಸ್‌ನಲ್ಲಿರಿಸಿ ಬಸ್‌ ಮೂಲಕ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮುಂತಾದ ನಗರಕ್ಕೆ ಕಳುಹಿಸಲಾಗುತ್ತಿತ್ತು ಎಂದು ಗೊತ್ತಾಗಿದೆ. 

SUMMARY | near Sivaganga petrol pump on Ballari Road. 



KEYWORDS | near Sivaganga petrol pump on Ballari Road.