ಸೀದಾ ಬಂದು ಗದ್ದೆಗೆ ಉರುಳಿದ ಚಂದ್ರಗುತ್ತಿ-ಸಿದ್ದಾಪುರ KSRTC ಬಸ್
bus going from veered off the road, Chandragutti , Sorab taluk to Siddapur ,Uttara Kannada district
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 3, 2025
ಸೊರಬ ತಾಲ್ಲೂಕು ಚಂದ್ರಗುತ್ತಿಯಿಂದ ಉತ್ತರಕನ್ನಡ ಜಿಲ್ಲೆ ಸಿದ್ದಾಪುರಕ್ಕೆ ಹೋಗುತ್ತಿದ್ದ ಬಸ್‌ವೊಂದು ರಸ್ತೆ ಬಿಟ್ಟು ಗದ್ದೆಗೆ ಹಾರಿದ ಘಟನೆಯೊಂದು ನಿನ್ನೆ ನಡೆದಿದೆ. ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ.
ಚಂದ್ರಗುತ್ತಿಯಿಂದ ಸಿದ್ದಾಪುರ ಕಡೆಗೆ ಬರುತಿದ್ದ KSRTC ಬಸ್ ಬಳ್ಳಟ್ಟೆ ಕ್ರಾಸ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿದೆ. ಆ ಬಳಿಕ ಅಡ್ಡಾದಿಡ್ಡಿ ಚಲಿಸಿದ ಬಸ್ ಅಲ್ಲಿಯೇ ಪಕ್ಕದಲ್ಲಿದ್ದ ಗದ್ದೆಗೆ ಬಿದ್ದಿದೆ. ಪರಿಣಾಮ ಘಟನೆಯಲ್ಲಿ ಚಾಲಕ ಸಹಿತ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ.
ಆಕ್ಸ್‌ಲ್ ಕಟ್ ಆಗಿ ಬಸ್ ಚಾಲಕನ ನಿಯಂತ್ರಣ ತಪ್ಪಿತ್ತು ಎನ್ನಲಾಗಿದೆ. ಗಾಯಾಳುಗಳಿಗೆ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | bus going from Chandragutti in Sorab taluk to Siddapur in Uttara Kannada district veered off the road and into a field.
KEY WORDS | bus going from veered off the road, Chandragutti , Sorab taluk to Siddapur ,Uttara Kannada district