ಟರ್ನಿಂಗ್‌ನಲ್ಲಿ ಎದುರುಬಂದ ಸ್ಕೂಲ್‌ ಬಸ್‌ | ಡಿಕ್ಕಿ ತಪ್ಪಿಸುವಾಗ ಸಂಭವಿಸಿತು ಅವಗಢ

bus carrying a marriage party rammed into a house near Puttur to avoid hitting a school bus

ಟರ್ನಿಂಗ್‌ನಲ್ಲಿ ಎದುರುಬಂದ ಸ್ಕೂಲ್‌ ಬಸ್‌ | ಡಿಕ್ಕಿ ತಪ್ಪಿಸುವಾಗ ಸಂಭವಿಸಿತು ಅವಗಢ
bus, Rammed into a house, Puttur,   school bus 

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024

ಶಾಲೆ ಬಸ್ಸಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ಮನೆಗೆ ಮದುವೆ ದಿಬ್ಬಣದ ಬಸ್‌ವೊಂದು ನುಗ್ಗಿದ ಘಟನೆ ಪುತ್ತೂರು ಸಮೀಪ ನಡೆದಿದೆ. 

ಮಾಣಿ-ಮೈಸೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು,  ಸುಳ್ಯದಿಂದ ಪೆರ್ಲಂಪಾಡಿ ಕಡೆ ಸಾಗುತ್ತಿದ್ದ ಶಾಲಾ ಬಸ್‌ ಹಾಗೂ ಪುತ್ತೂರಿನಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಮದುವೆಯ ಖಾಸಗಿ ಬಸ್ಸು ಅಮ್ಮಿನಡ್ಕದಲ್ಲಿ ತಿರುವಿನಲ್ಲಿ ಮುಖಾಮುಖಿಯಾಗಿದೆ. 

ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗುವ ಹಂತದಲ್ಲಿದ್ದಾಗ, ಮದುವೆ ದಿಬ್ಬಣದ ಬಸ್‌ನ್ನ ಚಾಲಕ ಇನ್ನೊಂದು ಬದಿಗೆ ಚಲಿಸಿದ್ಧಾನೆ. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಮನೆಗೆ ಬಸ್‌ ನುಗ್ಗಿದೆ. 

ಘಟನೆಯಲ್ಲಿ ಮನೆಯ ಗೋಡೆ ಮತ್ತು ಚಾವಣಿ ಹಾನಿಯಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ. 

SUMMARY|  A bus carrying a marriage party rammed into a house near Puttur to avoid hitting a school bus 

KEY WORDS |  bus, Rammed into a house, Puttur,   school bus