ತೀರ್ಥಹಳ್ಳಿ ತೆಪ್ಪೋತ್ಸವದ ಪಟಾಕಿ ಒಟ್ಟುಮಾಡಿ ಬೆಂಕಿ ಕೊಟ್ಟ ಬಾಲಕರು | ನಡೆದಿದ್ದೇನು?

boy was injured set off firecrackers , fireworks display during the Thirthahalli Ellamasye jatre

ತೀರ್ಥಹಳ್ಳಿ ತೆಪ್ಪೋತ್ಸವದ ಪಟಾಕಿ ಒಟ್ಟುಮಾಡಿ ಬೆಂಕಿ ಕೊಟ್ಟ ಬಾಲಕರು | ನಡೆದಿದ್ದೇನು?
boy was injured set off firecrackers , fireworks display during the Thirthahalli Ellamasye jatre

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 8, 2025 ‌‌   

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ಹೊಸವರ್ಷದ ದಿನ ನಡೆದ ತೆಪ್ಪೋತ್ಸವದ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನ ಪರೋಕ್ಷವಾಗಿ ಬಾಲಕನೊಬ್ಬ ಗಂಭೀರವಾಗಿ ಗಾಯಗೊಳ್ಳಲು ಕಾರಣವಾಗಿದೆ. ಸಿಡಿಮದ್ದು ಪ್ರದರ್ಶನದ ಬಳಿಕ ಅದರ ತ್ಯಾಜ್ಯಗಳ ವಿಲೇವಾರಿ ಆಗಬೇಕಿತ್ತು. ಅದರ ನಡುವೆ ಸಿಡಿದ ಪಟಾಕಿಗಳನ್ನ ಒಟ್ಟು ಹಾಕಿದ ಬಾಲಕರು ಅದಕ್ಕೆ ಬೆಂಕಿ ಕೊಟ್ಟಿದ್ದಾರೆ. ಈ ವೇಳೆ ಪಟಾಕಿ ಸಿಡಿದು ಬಾಲಕನೊಬ್ಬ ಮೈ ಕೈ ಕಾಲು ಸುಟ್ಟುಕೊಂಡಿದ್ದಾನೆ.ಸದ್ಯ ಈತನನ್ನ ಮೆಗ್ಗಾನ್‌ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತ ಜನವರಿ 1ರ ರಾತ್ರಿ ತೆಪ್ಪೋತ್ಸವ ನಡೆದಿತ್ತು. ಆದರೆ ಪಟಾಕಿ ತ್ಯಾಜ್ಯವನ್ನು ವಿಲೇವಾರಿ ಮಾಡಿರಲಿಲ್ಲ. ಈ ನಡುವೆ ಮೂವರು ಹುಡುಗರು ಕಳೆದ ಐದನೇ ತಾರೀಖು, ಪಟಾಕಿ ತ್ಯಾಜ್ಯ ಒಟ್ಟುಗೂಡಿಸುವಾಗ ಅದರಲ್ಲಿದ್ದ ಪಟಾಕಿ ಚೂರುಗಳನ್ನ ಹೆಕ್ಕಿ ಒಟ್ಟು ಮಾಡಿ ಬೆಂಕಿ ಹಾಕಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ. ಮೂಲಗಳ ಪ್ರಕಾರ, ಘಟನೆ ವೇಳೆ ಮೂವರು ಬಾಲಕರು ಇದ್ದರು ಎನ್ನಲಾಗಿದ್ದು, ಓರ್ವನ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನೊಬ್ಬ ಬಾಲಕನ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ. 

SUMMARY |  boy was injured while trying to set off the remaining firecrackers during the fireworks display during the Thirthahalli Ellamasye Fair.

KEY WORDS | boy was injured set off firecrackers , fireworks display during the Thirthahalli Ellamasye jatre