BOSS ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ದೂರು | ತಕ್ಷಣವೇ ಕ್ರಮ ಕೈಗೊಂಡ ಫೋಟೋ ಹಾಕಿದ ಶಿವಮೊಗ್ಗ ಎಸ್‌ಪಿ |

13

SHIVAMOGGA | MALENADUTODAY NEWS | Aug 13, 2024  ಮಲೆನಾಡು ಟುಡೆ  

ಕಾನೂನು ಉಲ್ಲಂಘನೆಯ ಬಗ್ಗೆ ಜನಸಾಮಾನ್ಯರು ಧ್ವನಿ ಎತ್ತಬಹುದು ಎಂಬುದಕ್ಕೆ ಉದಾಹರಣೆ ಎಂಬಂತೆ ವ್ಯಕ್ತಿಯೊಬ್ಬರು ಸೊಶಿಯಲ್‌ ಮೀಡಿಯಾದಲ್ಲಿ ಪೋಟೋ ಸಮೇತ ಪ್ರಕಟ ಮಾಡಿದ ವಿವರವೊಂದಕ್ಕೆ ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌  SP Mithun Kumar ಪ್ರತಿಕ್ರಿಯಿಸಿ ಕ್ರಮ ಕೈಗೊಂಡಿದ್ದಾರೆ. 

- Advertisement -

ಏನಿದು ಪ್ರಕರಣ 

ಶಿವಮೊಗ್ಗದಲ್ಲಿ ವಾಹವೊಂದಕ್ಕೆ Defective Register Number Plate ಅಳವಡಿಸಲಾಗಿತ್ತು. ನಂಬರ್‌ ಪ್ಲೇಟ್‌ನಲ್ಲಿ ಬಾಸ್‌ ಎಂಬ ರೀತಿಯಲ್ಲಿ ನಮೂದಿಸಲಾಗಿತ್ತು. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್‌ ಹಾಕಿದ್ದರಷ್ಟೆ ಅಲ್ಲದೆ ಅದನ್ನು ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ರವರ ಅಧಿಕೃತ ಸೋಶಿಯಲ್‌ ಮೀಡಿಯಾ ಅಕೌಂಟ್‌ಗೆ ಟ್ಯಾಗ್‌ ಮಾಡಿದ್ದರು. ತಮ್ಮ ಪೋಸ್ಟ್‌ ನಲ್ಲಿ ಅವರು, ಇಂತಹ ವೆಹಿಕಲ್‌ಗಳ ಬಗ್ಗೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದರು. 

ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ SP Mithun Kumar 

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿಯೇ ರಿಪ್ಲೆ ಮಾಡಿರುವ ಎಸ್‌ಪಿ ಮಿಥುನ್‌ ಕುಮಾರ್‌, ತೆಗೆದುಕೊಂಡ ಕ್ರಮದ ಬಗ್ಗೆ ಫೋಟೋ ಕಾಫಿಯನ್ನೆ ಹಾಕಿ ಐಎಂವಿ ಆಕ್ಟ್‌ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಬಿಹೆಚ್‌ ರೋಡ್‌ನಲ್ಲಿ ನಿಂತಿದ್ದ ವಾಹನದ ಮೇಲೆ 500 ರೂಪಾಯಿ ದಂಡ ವಿಧಿಸಲಾಗಿರುವ ಬಗ್ಗೆ  ಫೋಟೋ ಕಾಪಿಯಲ್ಲಿ ಮಾಹಿತಿ ನೀಡಲಾಗಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

Share This Article