ಫೆಬ್ರವರಿ 27 ರಿಂದ ಮಾರ್ಚ್‌ 3ರ ವರೆಗೆ ವಿಶೇಷ ಪುಸ್ತಕ ಮೇಳ | ಶಾಸಕರಿಗೆ ವಿಶೇಷ ಅವಕಾಶ

book fair in Vidhana Soudha premises, Vidhana Soudha premises, Bangalore

ಫೆಬ್ರವರಿ 27 ರಿಂದ ಮಾರ್ಚ್‌ 3ರ ವರೆಗೆ ವಿಶೇಷ ಪುಸ್ತಕ ಮೇಳ | ಶಾಸಕರಿಗೆ ವಿಶೇಷ ಅವಕಾಶ
book fair in Vidhana Soudha premises, Vidhana Soudha premises, Bangalore

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 5, 2025 ‌‌ 

ಬೆಂಗಳೂರು ವಿಧಾನಸೌಧ ಆವರಣದಲ್ಲಿ ವಿಶೇಷವಾಗಿ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಈ ಪುಸ್ತಕ ಮೇಳದಲ್ಲಿ ವಿಶೇಷವಾಗಿ 175 ಪುಸ್ತಕ ಮಳಿಗೆಗಳು ಇರಲಿದೆ. ಅಲ್ಲದೆ ಪುಸ್ತಕಗಳ ಬಿಡುಗಡೆ, ಚರ್ಚೆ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ, ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳು ಸಹ ಲಭ್ಯವಿರಲಿದೆ. ಮೇಲಾಗಿ ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಆಹಾರ ಮೇಳ ಸಹ ನಡೆಯಲಿದೆ

 

ಫೆಬ್ರವರಿ 27 ರಿಂದ ಮಾರ್ಚ್‌ 3ರ ವರೆಗೆ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ ನಡೆಯಲಿದೆ. ವಿಶೇಷವಾಗಿ ಶಾಸಕರು ತಮ್ಮ ನಿಧಿಯಿಂದ 2 ರಿಂದ 3 ಲಕ್ಷ ರೂ.ಗಳವರೆಗೆ ಪುಸ್ತಕಗಳನ್ನು ಖರೀದಿಸಿ ತಮ್ಮ ಕ್ಷೇತ್ರದ ಸಾರ್ವಜನಿಕ ಗ್ರಂಥಾಲಯ ಹಾಗೂ ಶಾಲೆಗಳಿಗೆ ಪೂರೈಸಲು ಅವಕಾಶವಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಜನರನ್ನು ಸಜ್ಜುಗೊಳಿಸಲು ಅಗತ್ಯವಿರುವ ಪಠ್ಯಪುಸ್ತಕಗಳು ಲಭ್ಯ ಇರಲಿವೆ. ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮೇಳಕ್ಕೆ ಪೂರಕವಾಗಿ ಆಹಾರಮೇಳ  ಆಯೋಜಿಸಲಾಗುವುದು ಎಂದು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ತಿಳಿಸಿದ್ದಾರೆ.

SUMMARY |  A special book fair has been organized at the Vidhana Soudha premises in Bangalore.

KEY WORDS | book fair in Vidhana Soudha premises, Vidhana Soudha premises, Bangalore