ನೇಣು ಬಿಗಿದ ಸ್ಥಿತಿಯಲ್ಲಿ ನಗರಸಭೆ ಮಾಜಿ ಸದಸ್ಯ ತರಕಾರಿ ಸತ್ಯನಾರಾಯಣ್‌ರ ಶವ ಪತ್ತೆ | ನಡೆದಿದ್ದೇನು?
Shivamogga Municipal Council member, tarkari Satyanarayana, Vinobanagar police station limits of Shivamogga
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 2, 2025
ಶಿವಮೊಗ್ಗ ನಗರದ ನಗರಸಭೆಯ ಮಾಜಿ ಸದಸ್ಯರೊಬ್ಬರ ಮೃತದೇಹ ನೇಣಿಗೆ ಶರಣಾದ ರೀತಿಯಲ್ಲಿ ಪತ್ತೆಯಾಗಿದೆ. ಕಾಂಗ್ರೆಸ್ ಮುಖಂಡ ತರಕಾರಿ ಸತ್ಯನಾರಾಯಣ ಅವರ ಶವ ಇಲ್ಲಿನ ವಿನೋಬನಗರದ ವಾಟರ್ ಟ್ಯಾಂಕ್ ಬಳಿ ಇರುವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನೂ ಸ್ಥಳದಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟ ಡೆತ್ ನೋಟ್ ಸಹ ಪತ್ತೆಯಾಗಿದೆ ಎನ್ನಲಾಗಿದ್ದು, ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿದೆ. ತರಕಾರಿ ಸತ್ಯನಾರಾಯಣ ಎಂದು ಕರೆಸಿಕೊಳ್ಳುತ್ತಿದ್ದ ಸತ್ಯನಾರಾಯಣ್‌ರವರ ಸಾವು ಅವರ ಕುಟುಂಬಸ್ಥರಲ್ಲಿಯು ಆಘಾತ ಮೂಡಿಸಿದ್ದು, ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.
SUMMARY | body of former Shivamogga Municipal Council member tarkari Satyanarayan was found in the Vinobanagar police station limits of Shivamogga.
KEY WORDS | Shivamogga Municipal Council member, tarkari Satyanarayana, Vinobanagar police station limits of Shivamogga.