ಮಾವಿನ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

body of a woman was found hanging , near Bommanakatte in Shivamogga 

ಮಾವಿನ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
body of a woman was found hanging , near Bommanakatte in Shivamogga 

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 11, 2024 ‌ 

ಶಿವಮೊಗ್ಗದ ಬೊಮ್ಮನಕಟ್ಟೆಯ ಸಮೀಪ ತೋಟವೊಂದರಲ್ಲಿ ಮಹಿಳೆಯೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾವಿನ ಮರವೊಂದರಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಮೃತರನ್ನ ಹೇಮಾವತಿ (50) ಎಂದು ಗುರುತಿಸಲಾಗಿದೆ. 

ಎಂದಿನಂತೆ ತೋಟದಲ್ಲಿ ವಾಕ್‌ ಮಾಡಲು ತೆರಳಿದ್ದ ಇವರು ವಾಪಸ್‌ ಬರದಿರುವುದನ್ನ ಗಮನಿಸಿದ ಕುಟುಂಬಸ್ಥರು ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ.  ಬೊಮ್ಮನ ಕಟ್ಟೆಯಲ್ಲಿ ಪತಿ ದೇವೇಂದ್ರಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ಹೇಮಾವತಿ ವಾಸವಿದ್ದರು. ಅವರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

SUMMARY |  body of a woman was found hanging in a garden near Bommanakatte in Shivamogga. 

KEY WORDS |  body of a woman was found hanging , near Bommanakatte in Shivamogga