ತೀರ್ಥಹಳ್ಳಿ ತುಂಗಾನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆ
Union Bank manager, body found in Thirthahalli, Tunga river
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ರಾಮೇಶ್ವರ ದೇವಸ್ಥಾನದ ಬಳಿಯಲ್ಲಿ ಕಾಲು ಜಾರಿ ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ಸಾವನ್ನಪ್ಪಿದ್ದಾರೆ. ಕಳೆದ ಸೋಮವಾರ ಅವರು ನಾಪತ್ತೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಿದಾಗ ಇವತ್ತು ಅವರ ಮೃತದೇಹ ಪತ್ತೆಯಾಗಿದೆ.
ಅರಳಸುರಳಿಯ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶ್ರೀವತ್ಸ (38) ರಾಮೇಶ್ವರದ ದೇವಸ್ಥಾನದ ಬಳಿ ತುಂಗಾನದಿಗೆ ಇಳಿದಿದ್ದರು. ಆ ಬಳಿಕ ಅವರ ಬಗ್ಗೆ ವಿಷಯ ಗೊತ್ತಾಗಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ ರಾಮಕೊಂಡದ ಸಮೀಪ ಅವರ ಬಟ್ಟೆ ವಸ್ತುಗಳು ಹಾಗೂ ಚಪ್ಪಲಿ ಪತ್ತೆಯಾಗಿತ್ತು. ಆನಂತರ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು. ಇವತ್ತು ಅವರ ಶವ ಪತ್ತೆಯಾಗಿದೆ.
SUMMARY | Union Bank manager, body found in Thirthahalli, Tunga river
KEY WORDS | Union Bank manager, body found in Thirthahalli, Tunga river