ದಬ್ಬಣ್ಣ ಚುಚ್ಚಿದ ಬೊಂಬೆ, ಮಡಿಕೆ ಬಾಯಿ ಬಂದ್, ಕಾಯಿ ಜುಟ್ಟಿಗೆ ಕಟ್ಟಿದ ನಿಂಬೆಹಣ್ಣು, ತ್ರೀಶೂಲ, ಮೊಟ್ಟೆ, ಮಡಿಕೆ!| ಅಬ್ಬಬ್ಬಾ ಇದೆಂಥಹಾ ಮಾಟ ಶಿವಮೊಗ್ಗದಲ್ಲಿ
black magic at arecanut garden, complaint at shikaripura rural, udugani case shikaripura

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 18, 2025
ಜಗತ್ತು ಬದಲಾಗುತ್ತಿದ್ದರೂ, ಹಳೆಯ ಕಂದಾಚಾರಗಳು ಬದಲಾಗುತ್ತಿಲ್ಲ. ಮನುಷ್ಯನೊಬ್ಬ ಎಷ್ಟೆ ಸಂತೋಷವಾಗಿರಲಿ, ಆತನ ಮನಸ್ಸನ್ನು, ಕುಂಕುಮ ಸುರಿದ ನಿಂಬೆಹಣ್ಣು ಹಾಳು ಮಾಡುತ್ತದೆ. ಹೌದು ವಾಮಾಚಾರ ಹೆಸರಿನಲ್ಲಿ ಮನುಷ್ಯನ ಮನಸ್ಸನ್ನೆ ದೂಳಿಪಟ ಮಾಡಿ, ಆತನನ್ನು ಸಂಕಷ್ಟಕ್ಕೆ ದೂಡವ ಕೃತ್ಯಗಳು ಇನ್ನು ಸಹ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಉಡುಗಣಿಯಲ್ಲಿ ಮನೆಯೊಂದರ ಸಮೀಪ ವಾಮಚಾರ ಮಾಡಲಾಗಿದೆ.
ವಿಶೇಷ ಅಂದರೆ, ಈ ಕೃತ್ಯವನ್ನು ಸಾಮಾನ್ಯ ರೀತಿಯಲ್ಲಿ ಮಾಡಿಲ್ಲ. ಇಲ್ಲಿನ ಬೋಗಿ ಗ್ರಾಮದಲ್ಲಿ ಮಡಿಕೆಯನ್ನ ಇಟ್ಟು, ಅದರಲ್ಲಿ ಆಕೃತಿಯೊಂದನ್ನು ಇಟ್ಟು ಕಟ್ಟು ಕಟ್ಟಲಾಗಿದೆ. ಜೊತೆಯಲ್ಲಿ ತ್ರೀಶೂಲವನ್ನು ಚುಚ್ಚಿ ಬಂಧನ ಮಾಡಲಾಗಿದೆ. ಇನ್ನೊಂದು ಮಡಿಕೆಯ ಬಾಯಿ ಕಟ್ಟಿ ದಾರ ಬಿಗಿಯಲಾಗಿದೆ. ಇದಲ್ಲದೇ ಮನುಷ್ಯ ರೀತಿಯ ಕಪ್ಪು ಆಕೃತಿಯೊಂದಕ್ಕೆ, ಚೀಟಿ ಕಟ್ಟಿ, ಅದಕ್ಕೆ ದಬ್ಬಣ ಚುಚ್ಚಲಾಗಿದೆ. ತೆಂಗಿನಕಾಯಿ ಜುಟ್ಟಿಗೆ ನಿಂಬೆಹಣ್ಣನ್ನು ಕೆಂಪುದಾರದಲ್ಲಿ ಕಟ್ಟಲಾಗಿದೆ. ಅಲ್ಲದೆ, ಮಡಿಕೆಯ ಸುತ್ತು ಲಿಂಬೆಹಣ್ಣನಿಟ್ಟು ಕುಂಕುಮ ಸುರಿದು ಮಾಟ ಮಾಡಲಾಗಿದೆ.
ಸಾಮಾನ್ಯವಾಗಿ ಮನೆ ಹಾಳಾಗಲಿ ಎಂದು ಈ ರೀತಿಯ ಕೃತ್ಯಗಳನ್ನು ಎಸೆಗುತ್ತಾರೆ. ಹೊಟ್ಟೆಕಿಚ್ಚಿಗೆ ಮಾಡುವ ಇಂತಹ ಕೃತ್ಯಗಳಿಂದ, ಸ್ವತಃ ಅವರುಗಳೇ ತೊಂದರೆಗೆ ಒಳಗಾಗುತ್ತಾರೆ ಎಂಬ ನಂಬಿಕೆಯು ಇದೆ. ಆದಾಗ್ಯು ಅಸೂಯೆಯಿಂದ ಇಂಹತ ಕುಕೃತ್ಯಗಳು ಇವತ್ತಿಗೂ ಹಳ್ಳಿ ಪ್ರದೇಶಗಳಲ್ಲಿ ವಿಶೇಷವಾಗಿ ಮುಂದುವರಿದು ಬಂದಿದೆ.
ಇನ್ನೂ ನಡೆದ ಘಟನೆ ವಿಚಾರಕ್ಕೆ ಸಂಬಂಧಿಸಿದಂತೆ, ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ವಾಮಾಚಾರ ನಡೆದಿರುವುದು ಕೆಲಸಗಾರರಿಗೆ ಗೊತ್ತಾಗಿದೆ. ಆ ಬಳಿಕ, ತೋಟದ ಕೆಲಸಕ್ಕೆ ಆಳುಗಳು ಬರುತ್ತಿಲ್ಲ ಎಂದು ಮಾಲೀಕರು ಆರೋಪಿಸಿದ್ದಾರೆ. ಮೇಲಾಗಿ ಈ ಕೃತ್ಯವೆಸಗಿದವನ್ನು ಹಿಡಿದು ಶಿಕ್ಷಿಸಿ ಎಂದು ಪೊಲೀಸರಿಗೆ ತೋಟದ ಮಾಲೀಕರು ದೂರು ಕೊಟ್ಟಿದ್ದಾರೆ.
SUMMARY | black magic at arecanut garden, complaint at shikaripura rural udugani case shikaripura
KEY WORDS | black magic at arecanut garden, complaint at shikaripura rural, udugani case shikaripura