ಸಾಗರ ಕಾಡಾನೆಗಳ ಜೊತೆಗೆ ಹುಲಿರಾಯನ ಕಾಟ | ಜೋಗ ರಸ್ತೆಯಲ್ಲಿ ವಾಕ್ ಹೋಗುವವರಿಗೆ ಭಯ ಹುಟ್ಟಿಸಿದ ಚಿರತೆ
Sagar taluk, tiger sighting near Kannur, black leopard sighting near Kargal
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 4, 2025
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಇದೀಗ ಆನೆಗಳ ಜೊತೆಗೆ ಹುಲಿಕಾಟವೂ ಆರಂಭವಾಗಿದೆ. ಶೆಟ್ಟಿಹಳ್ಳಿ ಭಾಗದಲ್ಲಿ ಹುಲಿ ಇರುವುದು ನಿಜ ಎಂಬಂತೆ ದೊಡ್ಡ ದೊಡ್ಡ ಹೆಜ್ಜೆಯ ಗುರುತುಗಳು ಕಾಣ ಸಿಕ್ಕಿರುವ ಬಗ್ಗೆ ಈಗಾಗಲೇ ಹಲವರು ಮಾಹಿತಿ ನೀಡಿದ್ದರು. ಇದೀಗ ಚೋರಡಿ ಸುತ್ತಮುತ್ತ ಆನೆಗಳ ಉಪಟಳ ಹೆಚ್ಚಾದ ಬೆನ್ನಲ್ಲೆ ಅಲ್ಲಿನ ಕಣ್ಣೂರು ಬಳಿಯ ಬೆಟ್ಟದಲ್ಲಿ ಹುಲಿಯೊಂದು ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಸ್ಥಳಿಯರ ಮಾಹಿತಿಗೆ ಪೂರಕವಾಗಿ ಅರಣ್ಯ ಇಲಾಖೆ ಕೂಡ ಜಾನುವಾರು ಬಗ್ಗೆ ಜಾಗೃತೆ ವಹಿಸುವಂತೆ ಹಾಗೂ ಕಾಡಿನೊಳಗೆ ಓಬ್ಬೊಬ್ಬರೆ ಓಡಾಡದಂತೆ ಎಚ್ಚರಿಕೆ ನೀಡಿದೆ ಎನ್ನಲಾಗುತ್ತಿದೆ.
ಕರಿ ಚಿರತೆ ಪ್ರತ್ಯಕ್ಷ
ಇನ್ನೊಂದೆಡೆ ಸಾಗರದ ಕಾರ್ಗಲ್ ನಲ್ಲಿ ಈ ಹಿಂದೆ ಕರಿಚಿರತೆಯೊಂದು ಓಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಈ ಜೋಗ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿರುವವರಿಗೆ ಕರಿಚಿರತೆ ಕಾಣ ಸಿಕ್ಕಿದೆ. ಇಲ್ಲಿನ ಮನೆಯೊಂದರಲ್ಲಿದ್ದ ನಾಯಿಯನ್ನ ಹಿಡಿದ ಕರಿಚಿರತೆ ಅದನ್ನ ಎಳದೊಯ್ಯುತ್ತಿದ್ದಾಗ ಸ್ಥಳೀಯರಿಗೆ ಕಾಣಿಸಿದೆ. ಈ ವೇಳೆ ಜನರು ಕೂಗಿಕೊಂಡ ಹಿನ್ನೆಲೆಯಲ್ಲಿ ಕರಿಚಿರತೆ ನಾಯಿಯನ್ನು ಅಲ್ಲಿಯೇ ಬಿಟ್ಟು ಹೋಗಿದೆ.
SUMMARY | Sagar taluk, tiger sighting near Kannur, black leopard sighting near Kargal
KEY WORDS | Sagar taluk, tiger sighting near Kannur, black leopard sighting near Kargal