ಮಗನ ಜೊತೆ ಬೈಕ್‌ನಲ್ಲಿ ಬರುತ್ತಿದ್ದ ತಂದೆಗೆ ಶಾಕ್ | ಎದುರು ಹೋಗುತ್ತಿದ್ದ ಹೋರಿ ತಿವಿದು ಸಾವು
bike rider was killed after being hit by a bull at Shiralakoppa in Shikaripura taluk
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024
ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಹೋರಿ ತಿವಿದ ಪರಿಣಾಮ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದಾರೆ. ಶಿರಾಳಕೊಪ್ಪದ ಇಟ್ಟಿಗೆ ಹಳ್ಳಿ ಬಳಿ ಘಟನೆ ನಡೆದಿದೆ. ಇಲ್ಲಿನ ನಿವಾಸಿ 45 ವರ್ಷದ ಸತೀಶ್ ಮೃತರು.
ಕಳೆದ ಭಾನುವಾರ ಇವರು ಮಗನ ಜೊತೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಇವರ ಮುಂದೆ ಸಾಗುತ್ತಿದ್ದ ಹೋರಿ ಇದ್ದಕ್ಕಿದ್ದ ಹಾಗೆ ರಚ್ಚೆ ಹಿಡಿದು ಇವರನ್ನ ತಿವಿದಿತ್ತು. ಪರಿಣಾಮ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದರು.
ನಿನ್ನೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಹೋರಿ ಮಾಲೀಕ ಹಾಗೂ ಹೋರಿಯನ್ನ ನೋಡಿಕೊಳ್ಳುತ್ತಿದ್ದವರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.
SUMMARY | bike rider was killed after being hit by a bull at Shiralakoppa in Shikaripura taluk.
KEY WORDS | bike rider was killed by bull , Shiralakoppa in Shikaripura taluk