ಮನೆಯಲ್ಲಿ ಮಲಗಿದ್ದವರಿಗೆ ಆಘಾತ | ಬೈಕ್ & ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ರು!
bike and a tractor caught fire ,Hosagadde , Huncha ,Hosanagata taluk ,Shivamogga district
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 12, 2024
ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್‌ಗೆ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಕುಕೃತ್ಯವೆಸಗಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚದಲ್ಲಿ ನಡೆದಿದೆ.
ಇಲ್ಲಿನ ಹೊಸಗದ್ದೆ ಗ್ರಾಮದಲ್ಲಿ ಘಟನೆ ನಡೆದಿದ್ದು ಲತೇಶ್ ಎಂಬವರಿಗೆ ಸೇರಿದಂತೆ ಬೈಕ್ ಹಾಗೂ ಟ್ರ್ಯಾಕ್ಟರ್ ಘಟನೆಯಲ್ಲಿ ಸುಟ್ಟುಹೋಗಿದೆ. ಬುಧವಾರ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಟ್ರ್ಯಾಕ್ಟರ್‌ಗೆ ತಡರಾತ್ರಿ ಯಾರೋ ಬೆಂಕಿ ಹಚ್ಚಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ. ಬೆಂಕಿ ಹೊತ್ತಿಕೊಂಡು ಉರಿದ ಬೆನ್ನಲ್ಲೆ ಎಚ್ಚರಗೊಂಡ ಮನೆಯವರು ಹೊರಬಂದು ಬೆಂಕಿ ಆರಿಸಿದ್ದಾರೆ.
ಆನಂತರ ಪ್ರಕರಣ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಈ ಕುರಿತಾಗಿ ವಿಚಾರಣೆ ನಡೆಸ್ತಿದ್ದಾರೆ.
SUMMARY | bike and a tractor caught fire at Hosagadde near Huncha in Hosanagata taluk of Shivamogga district
KEY WORDS | bike and a tractor caught fire ,Hosagadde , Huncha ,Hosanagata taluk ,Shivamogga district