ತೀರ್ಥಹಳ್ಳಿಯಲ್ಲಿ ಹರಿಹರ, ರಾಣೆಬೆನ್ನೂರು ನಿವಾಸಿಗಳ ಬೈಕ್ ಅಪಘಾತ | ಶಾಸಕರ ನೆರವು
Harihar, Ranebennur residents injured in bike accident in Thirthahalli, MLA Araga Jnanendra seeks help

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 3, 2025
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಶಿವರಾಜಪುರದ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವಲ್ಲಿ ಶಾಸಕ ಆರಗ ಜ್ಞಾನೇಂದ್ರರವರು ನೆರವಾದ ಬಗ್ಗೆ ವರದಿಯಾಗಿದೆ.
ತೀರ್ಥಹಳ್ಳಿ ಸುದ್ದಿ
ತಾಲ್ಲೂಕಿನ ಶಿವರಾಜಪುರ ಗಣಪತಿ ದೇವಸ್ಥಾನದಲ್ಲಿ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕೆ ಹೊಡೆದುಕೊಂಡಿದ್ದವು. ಘಟನೆಯಲ್ಲಿ ಮೂವರು ಅಲ್ಲಿಯೆ ಬಿದ್ದು ತುಸು ಹೆಚ್ಚೆ ಪೆಟ್ಟುಮಾಡಿಕೊಂಡಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸ್ತಿದ್ದ ಶಾಸಕ ಆರಗ ಜ್ಞಾನೇಂದ್ರ ಘಟನೆ ಗಮನಿಸಿ ವಿಚಾರಿಸಿದ್ದಾರೆ.
ಬಳಿಕ ಗಾಯಾಳುಗಳನ್ನು ಸಂತೈಸಿ ಜೆಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಗಾಯಗೊಂಡವರಲ್ಲಿ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹರಿಹರ ಮತ್ತು ರಾಣೆಬೆನ್ನೂರಿನವರಾದ ಈ ಗಾಯಾಳುಗಳು ಕೂಲಿ ಕೆಲಸಕ್ಕಾಗಿ ಉಂಟೂರುಕಟ್ಟೆ ಕೈ ಮರಕ್ಕೆ ಬಂದಿದ್ದರು ಎನ್ನಲಾಗಿದೆ.
SUMMARY | Harihar, Ranebennur residents injured in bike accident in Thirthahalli, MLA Araga Jnanendra seeks help
KEY WORDS | Harihar, Ranebennur , bike accident in Thirthahalli, MLA Araga Jnanendra