ಸಾಗರಕ್ಕೆ ಹೋಗ್ತಿದ್ದ ತೀರ್ಥಹಳ್ಳಿಯ ಅಡುಗೆ ಕಂಟ್ರಾಕ್ಟರ್‌ ರಿಪ್ಪನ್‌ಪೇಟೆ ಸಮೀಪ ಸಾವು | ನಡೆದಿದ್ದೇನು?

Yadamane village , Chakkodabile , Thirthahalli taluk,  bike accident , Ripponpete, Hosnagar taluk, Shimoga district

ಸಾಗರಕ್ಕೆ ಹೋಗ್ತಿದ್ದ ತೀರ್ಥಹಳ್ಳಿಯ ಅಡುಗೆ ಕಂಟ್ರಾಕ್ಟರ್‌ ರಿಪ್ಪನ್‌ಪೇಟೆ ಸಮೀಪ ಸಾವು | ನಡೆದಿದ್ದೇನು?
Yadamane village , Chakkodabile , Thirthahalli taluk,  bike accident , Ripponpete, Hosnagar taluk, Shimoga district

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 23, 2025 ‌‌ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪ ಸಂಭವಿಸಿದ ಬೈಕ್‌ ಅಪಘಾತದಲ್ಲಿ ತೀರ್ಥಹಳ್ಳಿ ತಾಲೂಕಿನ ಚಕ್ಕೊಡಬೈಲ್ ಸಮೀಪದ ಯಡಮನೆ ಗ್ರಾಮದ ಸುನೀಲ್ ಎಸ್ ವಿ ಎಂಬವರು ಮೃತಪಟ್ಟಿದ್ದಾರೆ. ರಿಪ್ಪನ್‌ ಪೇಟೆ ಸಮೀಪದ ತೀರ್ಥಹಳ್ಳಿ ರಸ್ತೆಯಲ್ಲಿ ಸಿಗುವ ವರಾನಹೊಂಡದ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. 

ಘಟನೆಯ ವಿವರ 

ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಪಲ್ಸರ್ ನಲ್ಲಿ ಬರುತ್ತಿದ್ದ ಸುನೀಲ್‌ರವ ಬೈಕ್‌ ವರಾನಹೊಂಡದ ಬಳಿಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಅವರಿಗೆ ಗಂಭೀರಗಾಯಗಳಾಗಿವೆ. ಅವರನ್ನು ಮೊದಲು ರಿಪ್ಪನ್‌ಪೇಟೆ, ತದನಂತರ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಂದ ಉಡುಪಿ ಆಸ್ಪತ್ರೆಗೆ ದಾಖಲಿಸಲು ಕರದೊಯ್ಯುತ್ತಿದ್ದ ಸಂದರ್ಭ ಸಾವನ್ನಪ್ಪಿದ್ದರು. ಅವರು ತೀರ್ಥಹಳ್ಳಿಯಲ್ಲಿ ಅಡುಗೆ ಕ್ಯಾಟರಿಂಗ್ ಸಂಸ್ಥೆ ನಿರ್ವಹಿಸುತಿದ್ದರು 

ಸಾಗರ ಸುದ್ದಿ | 

ಸಾಗರ ಟೌನ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಮನೆಯ ಹಂಚು ಒಡೆದಿರುವ ವಿಚಾರಕ್ಕೆ ಅಕ್ಕಪಕ್ಕದ ನಡುವೆ ಜಗಳವಾಗಿ 112 ಪೊಲೀಸರು ಮಧ್ಯಸ್ಥಿಕೆ ವಹಿಸಿದ ಪ್ರಸಂಗವೊಂದು ನಡೆದಿದೆ. ಗಲಾಟೆ ನಡೆಯುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹೆಂಚು ಒಡೆಯಲು ಕಾರಣ ಹುಡಕಿದಾಗ ತೆಂಗಿನ ಕಾಯಿ ಬಿದ್ದು ಹೆಂಚು ಒಡೆದಿರುವುದು ಗೊತ್ತಾಗಿದೆ. ಹೀಗಾಗಿ ತೆಂಗಿನ ಮರದ ಮಾಲೀಕರಿಗೆ ನೆರೆಹೊರೆಯ ಮನೆಯ ಹೆಂಚು ಹಾಕಿಸಿಕೊಂಡು ಪೊಲೀಸರು ಸೂಚಿಸಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.

SUMMARY |  A person named Sunil SV from Yadamane village near Chakkodabile in Tirthahalli taluk died in a bike accident near Ripponpet, Hosnagar taluk, Shimoga district.

KEY WORDS |  Yadamane village , Chakkodabile , Thirthahalli taluk,  bike accident , Ripponpete, Hosnagar taluk, Shimoga district.