SHIVAMOGGA | MALENADUTODAY NEWS | Aug 13, 2024 ಮಲೆನಾಡು ಟುಡೆ
ಅಪರೂಪದ ಪ್ರಕರಣ ಎಂಬಂತೆ, ಶಿವಮೊಗ್ಗದಲ್ಲಿ ಭೂಮಿ ಕಬಳಿಕೆ ಮಾಡಿದ ವ್ಯಕ್ತಿಯೊಬ್ಬರಿಗೆ ಶಿಕ್ಷೆಯಾಗಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ( Karnataka Anti-Land Grabbing Special Court ) 2024ರ ಜುಲೈ ತಿಂಗಳಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆ ಮತ್ತು ಭೂ ಕಬಳಿಕೆಯಾದ ಜಮೀನನ್ನು ಸರ್ಕಾರಕ್ಕೆ ವಾಪಸ್ಸು ಪಡೆಯಲು ಅದೇಶ ನೀಡಿದೆ.
ಏನಿದು ಪ್ರಕರಣ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಭದ್ರಾಪುರ ಗ್ರಾಮದ ಸರ್ವೆ ನಂ. 19ರ ಸರ್ಕಾರಿ ಜಮೀನಿನನ್ನು ಅದೇ ಗ್ರಾಮದ ವ್ಯಕ್ತಿಯೊಬ್ಬರು 25 ಗುಂಟೆ ಜಮೀನು ಹಾಗೂ ಇನ್ನೊಬ್ಬರು 36 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ ಎಂದು ಗ್ರಾಮಸ್ಥರು ದೂರಿದ್ದರು.
ಶಿಕಾರಿಪುರ ತಹಶೀಲ್ದಾರ್
ಈ ಸಂಬಂಧ ಶಿಕಾರಿಪುರ ತಹಶೀಲ್ದಾರ್ ನೀಡಿ ದೂರನ್ನು ಪರಿಗಣಿಸಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸದ್ದರು. ಆ ಬಳಿಕ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ)(1) ರಡಿಯಲ್ಲಿ ಶಿಕಾರಿಪುರ ತಾಲ್ಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ತದನಂತರ ಜೆ.ಎಂ.ಎಫ್.ಸಿ. ನ್ಯಾಯಾಲಯವು ಆರೋಪಿತರ ವಿರುದ್ದ ಸಿ.ಸಿ. ಸಂಖ್ಯೆ: 251/2017 ರಂತೆ ದಾಖಲಿಸಿ ಭಾಗಶಃ ವಿಚಾರಣೆಯನ್ನು ಕೈಗೊಂಡು ನಂತರ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಿತ್ತು
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ
ಈ ಪ್ರಕರಣವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವೀಕರಿಸಿ ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿತರು ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 5,000/-ರೂ. ದಂಡವನ್ನು ವಿಧಿಸಿದೆ

ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು 2ನೇ ವಿಶೇಷ ನ್ಯಾಯಾಲಯದ ಸದಸ್ಯರಾದ ಕೆ.ಹೆಚ್. ಅಶ್ವತ್ಥ ನಾರಾಯಣಗೌಡ ಪೀಠವು ಜು.25 ರಂದು ತೀರ್ಪು ನೀಡಿದೆ.
ಆರೋಪಿತರು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಶಿಕಾರಿಪುರ ತಹಶೀಲ್ದಾರ್‌ರವರಿಗೆ ನೀರ್ದೇಶಿಸಿ ತೀರ್ಪು ನೀಡಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ