ಶಿವಮೊಗ್ಗ ಕ್ಲಾರ್ಕ್ ಪೇಟೆ ಶಾಹಿದ್, ಭದ್ರಾವತಿಯಲ್ಲೇಕೆ ಗುಂಡೇಟು ತಿಂದ!? ಮತ್ತೊಂದು ಗ್ಯಾಂಗ್‌ವಾರ್ ಸ್ಕೆಚ್ಚಾ? ಬುಲೆಟ್ ಜೀವ ಉಳಿಸಿತ್ತಾ?!
bhadravati fire case

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 25, 2025
ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ ಶಾಹಿದ್ ಭದ್ರಾವತಿಯಲ್ಲಿ ಹೇಗೆ ಪೊಲೀಸ್ ಬುಲೆಟ್ ತಿಂದ? ಆತನ ಕಾಲಿಗೆ ಗುಂಡು ಹೊಡೆಯುವುದಕ್ಕೆ ಕಾರಣವಾಗಿದ್ದರೂ ಏನು? ಒಂದು ರೀತಿಯಲ್ಲಿ ಕಾಲಿಗೆ ಬುಲೆಟ್ ಫೈರ್ ಮಾಡಿ ಆತನ ಜೀವ ಉಳಿಸಿದರೇ ಪೊಲೀಸರು!? ಹೌದು ಎನ್ನುತ್ತದೆ ಟುಡೆ ಇನ್‌ಫಾರ್ಮರ್ ನ್ಯೂಸ್..
ನಿನ್ನೆ ದಿನ ಭದ್ರಾವತಿ ಕಾಚಗೊಂಡನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ರೌಡಿಶೀಟರ್ ಶಾಹಿದ್ ನನ್ನು ಹಿಡಿಯಲು ಪೊಲೀಸರು ಸುತ್ತುವರೆದ ಸಂದರ್ಭದಲ್ಲಿ ಆತ ಮಾರಕಾಸ್ತ್ರ ತೆಗೆದು ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದ. ಈ ವೇಳೆ ಪಿಐ ನಾಗಮ್ಮ ಶಾಹಿದ್ ಕಾಲಿಗೆ ಬುಲೆಟ್ ಫೈರ್ ಮಾಡುತ್ತಾರೆ. ಇದಿಷ್ಟು ಪೊಲೀಸ್ ಇನ್‌ಪರ್ಮೇಶನ್..
ಮೂಲಗಳ ಪ್ರಕಾರ, ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿಯಾಗಿದ್ದ ಶಾಹಿದ್ ಹದಿನೈದು ದಿನಗಳ ಹಿಂದಷ್ಟೆ ಜೈಲಿಂದ ರಿಲೀಸ್ ಆಗಿದ್ದ. ಶಿವಮೊಗ್ಗ ಲಷ್ಕರ್ ಮೊಹಲ್ಲಾದಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಈತನು ಸಹ ಆರೋಪಿಯಾಗಿದ್ದ ಎನ್ನಲಾಗಿದೆ. ಜೈಲಿಂದ ಹೊರಬಿದ್ದ ಈತ ಶಿವಮೊಗ್ಗದಲ್ಲಿ ತನಗೆ ಅಪಾಯ ಇದೆ ಎಂದು ಅರಿತು ಭದ್ರಾವತಿಗೆ ಶಿಫ್ಟ್ ಆಗಿದ್ದ. ಆದರೆ ಅಲ್ಲಿಯು ಎರಡು ಟೀಂ ಈತನನ್ನ ಟಾರ್ಗೆಟ್ ಮಾಡಿತ್ತು. ಈತನನ್ನು ಮುಗಿಸುವ ಸ್ಕೆಚ್ ಪಕ್ಕಾ ಆಗಿತ್ತಂತೆ.
ಇನ್ನೊಂದೆಡೆ ಈತ ಕೂಡ ಇನ್ನೊಂದು ಅಟ್ಯಾಕ್‌ಗೆ ಸಿದ್ಧತೆ ಮಾಡಿಕೊಳ್ತಿದ್ದ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು. ಹೀಗಾಗಿ ಫೆಬ್ರವರಿ 22 ರಂದು ಇವರನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಶಾಹಿದ್ ಹಾಗೂ ಉಳಿದ ಆರೋಪಿಗಳು ಎಸ್ಕೆಪ್ ಆಗಿದ್ದರು. ಇದೀಗ ಅದೇ ಕೇಸ್‌ನಲ್ಲಿ ಅರೆಸ್ಟ್ ಮಾಡಲು ಹೋಗಿದ್ದ ಪಿಐ ನಾಗಮ್ಮ & ಟೀಂ ಶಾಹಿದ್‌ಗೆ ಗುಂಡಿನ ರುಚಿ ತೋರಿಸಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಹಳೆಯ ಕೇಸ್ ಮೇಲೆ ಅರೆಸ್ಟ್ ಮಾಡಲು ತೆರಳತ್ತಾರೆ. ಆ ಸಂದರ್ಭದಲ್ಲಿ ಶಾಹಿದ್‌ಗೆ ಗುಂಡೇಟು ಬೀಳುತ್ತದೆ. ಹೀಗೆ ಗುಂಡೇಟು ತಿಂದು ಜೈಲು ಸೇರದೆ ಹೋದರೆ, ಶಾಹಿದ್ ಖಲ್ಲಾಸ್ ಆಗುತ್ತಿದ್ದ ಎನ್ನುತ್ತದೆ ಪಾತಕ ಲೋಕ. ಕ್ರೈಂ ನಡೆಯುವುದನ್ನ ತಡೆಯುವುದು ಸಹ ಪೊಲೀಸರ ಮುಂಜಾಗ್ರತಾ ಕೆಲಸ. ಆ ನಿಟ್ಟಿನಲ್ಲಿ ಸಂಭವೀಯ ಅಪರಾಧವನ್ನು ತಡೆಯುವ ಸಲುವಾಗಿ ಪೊಲೀಸರು ಶಾಹಿದ್‌ನನ್ನ ಅರೆಸ್ಟ್ ಮಾಡಿದ್ದಾರೆ.
ಇನ್ನೂ ಶಾಹಿದ್ ವಿರುದ್ದ ಕೊಲೆ, ಡಕಾಯಿತಿ, ಕೊಲೆ ಯತ್ನ, ಕಳವು, ಗಾಂಜಾ ಮಾರಾಟ, ಸೇವನೆ, ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳಿವೆ. ಶಿವಮೊಗ್ಗ ಹಾಗೂ ಭದ್ರಾವತಿ ಹಾಗೂ ಬೆಳಗಾವಿಯು ಸೇರಿದಂತೆ ಒಟ್ಟು 13 ಕೇಸ್‌ಗಳು ಈತನ ಮೇಲಿದೆ.
SUMMARY | bhadravati fire case
KEY WORDS | bhadravati fire case