10 ವರ್ಷಗಳಿಂದ ಕೋರ್ಟ್ ಹತ್ರ ಸುಳಿಯದ ಆರೋಪಿ ಓಲ್ಡ್‌ಟೌನ್ ಪೊಲೀಸರಿಂದ ಅರೆಸ್ಟ್!
bhadravati crime case updates

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 8, 2025
ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಿವಾಸಿಯೊಬ್ಬನನ್ನು ಪೊಲೀಸರು ಅರೆಸ್ಟ್ ಮಾಡಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
2012 ರಲ್ಲಿ ನಡೆದ 392 IPC ಅಡಿಯಲ್ಲಿನ ಪ್ರಕರಣದ ವಿಚಾರಣೆ ಭದ್ರಾವತಿಯ 02 ನೇ ACJ & JMFC ನ್ಯಾಯಾಲಯದಲ್ಲಿ 2014 ರ ಸಿಸಿ ನಂಬರ್ ಅಡಿಯಲ್ಲಿ ನಡೆಯುತ್ತಿರುತ್ತದೆ. ಆದರೆ, ಪ್ರಕರಣದ ಆರೋಪಿ ಕಳೆದ10 ವರ್ಷಗಳಿಂದ ವಿಚಾರಣೆಗೆ ಹಾಜರಾಗಿರಲ್ಲ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪತ್ತೆ ಮಾಡುವಂತೆ, ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹಳೆನಗರ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.