ಜಿಂಕ್‌ಲೈನ್ ರೋಡ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಶಾಕ್ | ಭದ್ರಾವತಿಯಲ್ಲಿ ಮತ್ತೊಂದು ಕ್ರೈಂ
bhadravati ,china snatching , crime in shivamogga , bikers ,

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 24, 2025
ಶಿವಮೊಗ್ಗ ಜಿಲ್ಲೆ ಭದ್ರಾವತಿ ಬೂಪಾಸ್ ಬಳಿ ಬೈಕ್‌ನಲ್ಲಿ ಗಂಡನ ಜೊತೆ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕದಿಯಲಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತರು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ತಾಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಭದ್ರಾವತಿ ಅಪರಾಧ ಸುದ್ದಿ
ಭದ್ರಾವತಿ ತಾಲ್ಲೂಕಿನ ಹಿರಿಯೂರು ಗ್ರಾಮದ ಹನುಮಂತೇಗೌಡ ಅವರು ತಮ್ಮ ಪತ್ನಿ ಭಾಗ್ಯಮ್ಮರವರ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇವರಿಬ್ಬರುಜಿಂಕ್‌ಲೈನ್ ಮಾದೇಶ್ವರ ದೇವಸ್ಥಾನ ರಸ್ತೆ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇವರಿದ್ದ ಬೈಕ್‌ನ್ನು ಹಿಂಬಾಲಿಸುತ್ತ ಹಿಂದಿನಿಂದ ಬಂದ ಬೈಕ್‌ನಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಭಾಗ್ಯಮ್ಮ ಅವರ ಕುತ್ತಿಗೆಗೆ ಕೈ ಹಾಕಿ 35 ಗ್ರಾಂನ ₹1.75 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಕಸಿದು ಪರಾರಿಯಾಗಿದ್ದಾರೆ.ಸದ್ಯ ಘಟನೆಯ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
SUMMARY | bhadravati ,china snatching , crime in shivamogga , bikers ,
KEY WORDS | bhadravati ,china snatching , crime in shivamogga , bikers ,