ಸಾಗರ ರಸ್ತೆಯಲ್ಲಿ ರಸ್ತೆ ಪಕ್ಕಕ್ಕೆ ಜಾರಿದ ಬೆಂಗಳೂರು TO ಭಟ್ಕಳ ಬಸ್
Bengaluru TO Bhatkal bus skidds off the road on Sagar Road
SHIVAMOGGA | MALENADUTODAY NEWS | Aug 4, 2024
ಮಳೆಯ ನಡುವೆ ಶಿವಮೊಗ್ಗದಲ್ಲಿ ನೆಲ ಜಾರುವ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಜೋಗ ನೋಡಲು ಹೋದವರು ಒಂದು ಸಲವಾದರೂ ಜಾರಿ ಬೀಳುತ್ತಿದ್ದಾರೆ.
ಇದಕ್ಕೆ ಕಾರಣ ಮಳೆಯಿಂದಾಗಿ ಹಲವೆಡೆ ನೆಲ ಪಾಚಿ ಕಟ್ಟಿದೆ. ಹೀಗಾಗಿ ಮನುಷ್ಯರಷ್ಟೆ ಅಲ್ಲದೆ ವಾಹನಗಳು ಸಹ ಜಾರಿ ಒಂದು ಬದಿಗೆ ವಾಲುತ್ತಿದೆ.
ರಸ್ತೆ ಪಕ್ಕಕ್ಕೆ ಜಾರಿದ ಬಸ್
ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಬಳಿಯಲ್ಲಿ ಬಸ್‌ವೊಂದು ರಸ್ತೆ ಬದಿಗೆ ಜಾರಿದ ಘಟನೆಯೊಂದು ವರದಿಯಾಗಿದೆ.
ಆನಂದಪುರ ಸಮೀಪದ ಮುಂಬಾಳ ಕ್ರಾಸ್‌ನಲ್ಲಿ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋದ ಬಸ್‌ವೊಂದು ರಸ್ತೆ ಪಕ್ಕಕ್ಕಿಳಿದು ಜಾರಿದ ಘಟನೆ ಬಗ್ಗೆ ನಿನ್ನೆ ವರದಿಯಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಬೆಂಗಳೂರು-ಭಟ್ಕಳ ಬಸ್ | Bengaluru TO Bhatkal bus
ಬಸ್ ಬೆಂಗಳೂರಿನಿಂದ ಭಟ್ಕಳಕ್ಕೆ ತೆರಳುತ್ತಿತ್ತು. ಈ ವೇಳೆ ಮುಂಬಾಳು ಕ್ರಾಸ್‌ನಲ್ಲಿ ಕಾರೊಂದು ನಿಂತಿತ್ತು.
ಅದಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸುವ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಆತ ಕಂಟ್ರೋಲ್‌ಗೆ ತೆಗೆದುಕೊಳ್ಳುವಷ್ಟರಲ್ಲಿ ಬಸ್ ರಸ್ತೆ ಪಕ್ಕಕ್ಕೆ ಜಾರಿದೆ.
ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಏನೂ ಸಹ ಆಗಲಿಲ್ಲ. ಬಸ್‌ನಲ್ಲಿ ಸುಮಾರು 30 ಜನ ಪ್ರಯಾಣಿಸ್ತಿದ್ದರು ಎಂದು ಗೊತ್ತಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ