ದೇವಸ್ಥಾನದ ಹತ್ತಿರ ಬಂದ ಬೋನಿಗೆ ಬಿದ್ದ ಕರಡಿ | ಸೆರೆಯಾದ ಜಾಂಬವಂತ
Shimoga , bear fell into a Cage, kept by the forest department, Danayakapura village in Holehonnur area, bear was captured near the local Kalabhairaveshwara temple
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024
ಶಿವಮೊಗ್ಗ | ಇಲ್ಲಿನ ಹೊಳೆಹೊನ್ನೂರು ಭಾಗದಲ್ಲಿ, ಡಣಾಯಕಪುರ ಗ್ರಾಮದಲ್ಲಿ ಕರಡಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಸ್ಥಳೀಯ ಕಾಲಭೈರವೇಶ್ವರ ದೇವಸ್ಥಾನದ ಸಮೀಪ ಕರಡಿಯು ಸೆರೆಯಾಗಿದೆ
ಕಳೆದ 15 ದಿನಗಳಿಂದ ಈ ಭಾಗದಲ್ಲಿ ಕರಡಿಯಿಂದಾಗಿ ಆತಂಕ ಸೃಷ್ಟಿಯಾಗಿತ್ತು. ಕತ್ತಲ ಹೊತ್ತಲ್ಲಿ ಇಲ್ಲಿ ಹೆಚ್ಚು ಓಡಾಡುತ್ತಿದ್ದ ಕರಡಿ ಜನರನ್ನ ಭಯ ಬೀಳಿಸಿತ್ತು. ಸ್ಥಳೀಯರು ಸಂಜೆಯಾಗುತ್ತಿದ್ದಂತೆ ಮನೆ ಸೇರಿಕೊಳ್ಳುವಂತ ಸನ್ನಿವೇಶ ಕರಡಿ ನಿರ್ಮಾಣ ಮಾಡಿತ್ತು.
ಈ ನಿಟ್ಟಿನಲ್ಲಿ ಕರಡಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ಹೊಳೆಹೊನ್ನೂರು ಅರಣ್ಯ ಸಿಬ್ಬಂದಿ ಮೂರು ಕಡೆ ಬೋನ್ ಇರಿಸಿದ್ದರು. ಇದೀಗ ದೇವಸ್ಥಾನದ ಸಮೀಪದ ಬೋನಿಗೆ ಕರಡಿ ಬಿದ್ದಿದೆ. ಇನ್ನೂ ಕರಡಿಯನ್ನ ಸಂರಕ್ಷಿಸಿರುವ ಅರಣ್ಯ ಇಲಾಖೆ ಅದನ್ನ ಸಂರಕ್ಷಿತ ಕಾಡಿಗೆ ಬಿಟ್ಟಿದ್ದಾರೆ.
SUMMARY | Shimoga , bear fell into a Cage, kept by the forest department, Danayakapura village in Holehonnur area, bear was captured near the local Kalabhairaveshwara temple
KEYWORDS | Shimoga , bear fell into a Cage, kept by the forest department, Danayakapura village in Holehonnur area, bear was captured near the local Kalabhairaveshwara temple